ಚಿಟಗುಪ್ಪ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಯಾವಾಗ ಪ್ರಾರಂಭವಾಗಿ ಯಾವಾಗ ಮುಕ್ತಾಯವಾಗುತ್ತಿತ್ತೋ ಎಂಬುದನ್ನು ಈ ಹಿಂದೆ ಯಾರಿಗೂ ಗೊತ್ತಾಗುತ್ತಿರಲಿಲ್ಲ.
ಆದರೆ ಸದ್ಯ ನಡೆಯುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗಾಗಿ ಅಭ್ಯರ್ಥಿಗಳಿಂದ ಮತ ಭೇಟಿ ಎಗ್ಗಿಲ್ಲದೇ ಜೋರಾಗಿ ನಡೆಯುತ್ತಿದೆ.
ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದ ಪಿಕೆಪಿಎಸ್ ನಿರ್ದೇಶಕರ ಆಯ್ಕೆಗಾಗಿ ಜನವರಿ 12 ರಂದು ಮತದಾನ ಜರುಗಲಿದ್ದು ಗೆಲುವಿಗಾಗಿ ಎರಡು ಪೆನಾಲ್ ಗಳು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ಗ್ರಾಮದ ವಿವಿಧದೆ ತಮ್ಮ ಫೇನಾಲ್ ನಲ್ಲಿ ಇರುವ ಅಭ್ಯರ್ಥಿಗಳ ದೊಡ್ಡ ದೊಡ್ಡ ಕಟೌಟ್ ಹಾಕಿ ಮತದಾರರ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಅಲ್ಲದೆ ಮತದಾರರನ್ನ ಭೇಟಿ ಮಾಡಿ ಅವರ ಮನವಲಿಸುವಲ್ಲಿ ಕಾರ್ಯಪ್ರವರ್ತರಾಗಿದ್ದಾರೆ.ಎರಡು ಪೆನಾಲ್ ಅಭ್ಯರ್ಥಿಗಳ ಭರ್ಜರಿ ಪ್ರಚಾರ ನೋಡಿದರೆ ತಾಳಮಡಗಿ ಪಿಕೆಪಿಎಸ್ ಚುನಾವಣೆ ಇನ್ನೂ ಬಹಳಷ್ಟು ರಂಗೇರಲಿದೆ ಎಂದು ಮತದಾರರು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಇಷ್ಟೊಂದು ತಾರಕಕ್ಕೆ ಎರುತ್ತಿರುವ ಚುನಾವಣೆ ಅಖಾಡದಲ್ಲಿ ಜನವರಿ 12ರಂದು ಜಯದ ಮಾಲೆ ಯಾರ ಕೊರಳಿಗೆ ಬಿಳಲಿದೆ ಎಂಬುದನ್ನು ಕಾದು ನೀಡಬೇಕಾಗಿದೆ.
ವರದಿ : ಸಜೀಶ ಲಂಬುನೋರ್