ಚಿಟಗುಪ್ಪ : ಚಿಟಗುಪ್ಪ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ಜರುಗಿತ್ತು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಸಿದರಿಂದ ಅಧ್ಯಕ್ಷರಾಗಿ ಸಿದ್ದಾರೂಢ ಶಿವಲಿಂಗಪ್ಪ ಉಪಾಧ್ಯಕ್ಷರಾಗಿ ಅಂಬದಾಸ ಶಂಕ್ರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆರೆಸಿದ್ದ ಮೋರಟಗಿ ತಿಳಿಸಿದರು.
ಬಳಿಕ ಪಿಕೆಪಿಎಸ್ ನೂತನ ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ಸರ್ವ ನಿರ್ದೇಶಕರನ್ನು ಪಿಕೆಪಿಎಸ್ ಹಾಗೂ ಗ್ರಾಮದ ಮುಖಂಡರಿಂದ ಸನ್ಮಾನಿಸಿ ಅಭಿನಂದಿಸಲಾಯಿತು.ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸಂಭ್ರಮಾಚಾರಣೆ ಮಾಡಿದರು.
ವರದಿ : ಸಜೀಶ ಲಂಬುನೋರ್




