Ad imageAd image

ಜನ ವಸತಿ ಪ್ರದೇಶದಲ್ಲಿಯೇ ಪತನಗೊಂಡ ವಿಮಾನ : 61 ಸಾವು 

Bharath Vaibhav
ಜನ ವಸತಿ ಪ್ರದೇಶದಲ್ಲಿಯೇ ಪತನಗೊಂಡ ವಿಮಾನ : 61 ಸಾವು 
WhatsApp Group Join Now
Telegram Group Join Now

ಬ್ರೆಜಿಲ್ ನ ವಿನ್ಹೆಡೊ, ಸಾವೊ ಪಾಲೊದಲ್ಲಿ ಸಂಭವಿಸಿದ ವಿಮಾನ ದುರಂತದ ಎಲ್ಲಾ 61 ಜನರ ಸಾವನ್ನಪ್ಪಿದ್ದಾರೆ. ಪ್ರಾದೇಶಿಕ ವೊಪಾಸ್‌ನಿಂದ ನಿರ್ವಹಿಸಲ್ಪಡುವ ವಿಮಾನವು ಪರಾನಾದ ಕ್ಯಾಸ್ಕಾವೆಲ್‌ನಿಂದ ಸಾವೊ ಪಾಲೊದ ಗೌರುಲ್ಹೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗದಲ್ಲಿದ್ದಾಗ ಸ್ಥಳೀಯ ಸಮಯ ಮಧ್ಯಾಹ್ನ 1:30 ರ ಸುಮಾರಿಗೆ ಕುಸಿದು ಬಿದ್ದಿದೆ.

ವಸತಿ ಪ್ರದೇಶದಲ್ಲೇ ವಿಮಾನ ಪತನಾಗಿದ್ದು, ಅದೃಷ್ಟವಶಾತ್ ಯಾವುದೇ ಸ್ಥಳೀಯ ನಿವಾಸಿಗಳು ಗಾಯಗೊಂಡಿಲ್ಲ, ಒಂದು ಮನೆಗೆ ಹಾನಿಯಾಗಿದೆ.

ಅಧಿಕಾರಿಗಳು ದುರಂತದ ಕಾರಣ ತಿಳಿಯಲು ತನಿಖೆ ಮಾಡುತ್ತಿದ್ದಾರೆ. ಬ್ರೆಜಿಲ್‌ನ ವಿಮಾನ ಅಪಘಾತಗಳ ತನಿಖಾ ಮತ್ತು ತಡೆಗಟ್ಟುವಿಕೆ ಕೇಂದ್ರದ ಮುಖ್ಯಸ್ಥ ಏರ್ ಬ್ರಿಗೇಡಿಯರ್ ಮಾರ್ಸೆಲೊ ಮೊರೆನೊ, ಪ್ರಾಥಮಿಕ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

 

 

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!