ಯಾದಗಿರಿ: ಸ್ವಘೋಷಿತ ದೇವಮಾನವ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲರೋಜಾ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಬುಧವಾರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶೀಧರ್ ಕೋಸುಂಬೆ ದಾಖಲಿಸಿಕೊಂಡ ಸ್ವಯಂ ದೂರಿನ ಅನ್ವಯ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಪತ್ರ ಸುದ್ದಿಯಾಗಿತ್ತು, ಇದೀಗ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಸಿಡಿಪಿಒ ಅವರ ದೂರು ಮೇರೆಗೆ ಮುತ್ಯಾನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಇನ್ನು ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ಒಂದು ಬಿಡುಗಡೆ ಮಾಡಿದ್ದು, “ಮಗಳು ಎಂಬ ಭಾವನೆಯಲ್ಲಿ ಆ ಬಾಲಕಿಯೊಡನೆ ಪ್ರೀತಿಯಿಂದ ನಡೆದುಕೊಂಡಿದ್ದೇನೆ ವಿನಹ ಯಾವುದೇ ಕೆಟ್ಟ ಉದ್ದೇಶ ಖಂಡಿತವಾಗಿ ಇಲ್ಲ. ಕಾನೂನು ಹೋರಾಟದಲ್ಲಿ ನನಗೆ ಖಂಡಿತ ಜಯ ದೊರಕಲಿದೆ. ಇದು ನನ್ನದೇ ಗೆಲುವು, ನಾನೇ ಗೆಲ್ಲುವೆ, ಭಕ್ತರು ಯಾರೂ ಆತಂಕಕ್ಕೆ ಒಳಗಾಗಗಬೇಡಿ” ಎಂದು ಸ್ಪಷ್ಟನೆ ನೀಡಿದ್ದಾನೆ.
ಪೋಕ್ಸೋ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಮುತ್ಯಾನ ಬೆಂಬಲಿಗರು ‘We Stand With Mallikarjun Mutya’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




