ಅಥಣಿ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ “ಕಾವ್ಯ ಕುಂಚ” 5ನೇ ಭಾಗದ ಕವನ ಸಂಕಲನ ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೋಹಳ್ಳಿ ಗ್ರಾಮದ ಪುಸ್ತಕ ಮನೆಯ ಗ್ರಂಥಾಲಯದಲ್ಲಿ ಲೋಕಾರ್ಪಣೆ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಪುಸ್ತಕ ಮನೆ ಬಳಗದ ಅಧ್ಯಕ್ಷರಾದ ಸದಾಶಿವ ಹರಪಾಳೆ ಹಾಗೂ ಕೇದಾರಿ ವಳಸಂಗ ತುಖಾರಾಮ ದೇವಖಾತೆ ಸೋಮಶೇಖರ್ ಝರೆ ಸಿಕಂದರ್ ಮುಜಾವರ ಗಣೇಶ್ ಪೂಜಾರಿ ಸೇರಿಕೊಂಡು ಈ ಕವನ ಸಂಕಲನ ಲೋಕಾರ್ಪಣೆ ಮಾಡಿದರು.
ನಂತರ ಊರಿನ ಮುಖಂಡರು ಮಾತನಾಡಿ ಸಣ್ಣ ವಯಸ್ಸಿನಲ್ಲಿ 20ಕ್ಕೂ ಹೆಚ್ಚು ಪುಸ್ತಕದಲ್ಲಿ ನಮ್ಮ ಊರಿನ ಹುಡುಗ ಬೀರಪ್ಪ ಡಂಬಳಿ ಬರೆದ ಸಾಕಷ್ಟು ಕವನಗಳು ಪ್ರಕಟ ಆಗಿರೋದು ಸಂತೋಷದ ವಿಷಯ ಎಂದರು.
ಬೀರಪ್ಪ ಡಂಬಳಿ ಸಾಹಿತ್ಯ ಲೋಕದಲ್ಲಿ ಕಹೋಳ ಕವಿ ಎಂದು ಹೆಸರು ವಾಸಿಯಾಗಿರೋದು ನಮ್ಮ ಊರಿಗೆ ಹೆಮ್ಮೆಯ ವಿಷಯ ಇನ್ನು ರಾಜ್ಯದ್ಯಂತ ಒಳ್ಳೆ ಹೆಸರು ಮಾಡಲಿ ಅನ್ನೋದೇ ನಮ್ಮ ಆಸೆ ಎಂದರು.
ವರದಿ : ಅಜಯ ಕಾಂಬಳೆ