Ad imageAd image

ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಪೊಲೀಸರು 

Bharath Vaibhav
ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಪೊಲೀಸರು 
WhatsApp Group Join Now
Telegram Group Join Now

ಕಲಬುರಗಿ : ದುಡ್ಡಿಗಾಗಿ ರಾಷ್ಟ್ರದ ವಿವಿಧ ಪ್ರತಿಷ್ಠಿತ ವಿವಿಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಕಲಬುರಗಿಯ ಸೆನ್​​ ಪೊಲೀಸರು ಬೇಧಿಸಿದ್ದಾರೆ.

ಈ ಪ್ರಕರಣದ ಕಿಂಗ್​ ಪಿನ್​ ದೆಹಲಿ ಮೂಲದ​​​​​​ ರಾಜೀವ್​​​ ಸಿಂಗ್​ ಅರೋರಾ ಎಂಬುವವನ್ನು ದೆಹಲಿಯಲ್ಲಿ ಬಂಧಿಸಿ ಕಲಬುರಗಿಗೆ ಖಾಕಿ ಪಡೆ ಕರೆ ತಂದಿದ್ದು, ಇನ್ನಿತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ನಗರದ ಏಷಿಯನ್ ಮಾಲ್​ ನಲ್ಲಿ ಗ್ಲ್ಯಾಮ್​​​ ಚಾಯಿಸ್ ಹೆಸರಿನ ಬಟ್ಟೆ ಅಂಗಡಿಯಲ್ಲಿ ಎಲೆಜೆನ್ಸ್​​​​​​​​​​​ ಟೆಕ್ನಾಲಜಿ & ಪ್ಲೇಸ್​​​​​ಮೆಂಟ್​​ ​ ಬ್ಯೂರೋ ಎಂಬ ಹೆಸರಲ್ಲಿ ನಗರದ ತಾರ್​​​ಫೈಲ್​ ನಿವಾಸಿ ಆರೋಪಿ ಮೊಹ್ಮದ್​​​ ಖಾನ್​​​​​ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಸೆನ್​​ ಠಾಣೆಯ ಪೊಲೀಸರ ತಂಡ ಕಿನ್​​​ ಪಿನ್​​​ನನ್ನು ಬಂಧಿಸಿದೆ. 10ನೇ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಇ., ಬಿ.ಟೆಕ್​ ಇನ್ನಿತರೆ ಪದವಿಯ ನಕಲಿ ಅಂಕಪಟ್ಟಿಯನ್ನು ಮಾರಾಟ ಮಾಡುತ್ತಿದೆ ಎಂಬ ದೂರಿನಡಿ ತನಿಖೆ ಕೈಗೊಂಡಿದ್ದ ಸ್ಟೇಷನ್​ ಬಜಾರ್ ಪೊಲೀಸರ ವರದಿಯಂತೆ ಸೆನ್​​ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತನಿಂದ ಎರಡು ಲ್ಯಾಪ್​​​ ಟಾಪ್, 1 ಪ್ರಿಂಟರ್, 36 ಮೊಬೈಲ್​, 28 ವಿವಿಧ ವಿವಿಗಳ ಹೆಸರಿನ 122ಕ್ಕೂ ಹೆಚ್ಚು ನಕಲಿ ಸೀಲ್​​, ನಕಲಿ ಅಂಕಪಟ್ಟಿ ತಯಾರಿಸಲು ಇಟ್ಟಿದ್ದ 1,626 ಖಾಲಿ ಪೇಪರ್ಸ್​​, 87 ವಿವಿಧ ಬ್ಯಾಂಕ್​​ ಖಾತೆಗಳ ಪಾಸ್​​ಬುಕ್, ರೂ.1,20,000 ನಗದನ್ನು ಪೊಲೀಸರು ಜಪ್ತಿ ಮಾಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!