ರಾಯಚೂರು : ಏ.02 (ಕರ್ನಾಟಕ ವಾರ್ತೆ): ಪೊಲೀಸ್ ಇಲಾಖೆಯು ಗುರುವಾರ ರಾಯಚೂರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಆರಕ್ಷಕ ಉಪ ನಿರೀಕ್ಷಕರಾದ ಬಸವರಾಜ ಅವರು ಮಾತನಾಡಿ, ಪೊಲೀಸರು ಎಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಅಲ್ಲಿ ಧ್ವಜ ಇರುತ್ತದೆ. ಪೊಲೀಸ್ ಧ್ವಜದ ಗೌರವ ಎತ್ತಿ ಹಿಡಿಯುವುದು ಪೊಲೀಸರ ಕರ್ತವ್ಯ ಎಂದರು.
ಇAದು ಪೋಲೀಸ್ ಇಲಾಖೆಗೆ ಮಹತ್ವದ ದಿನವಾಗಿದ್ದು, 1965ರ ಎಪ್ರಿಲ್ 2ರಂದು ಕರ್ನಾಟಕದಲ್ಲಿ ಪೋಲೀಸ್ ಪಡೆ ಅಧಿಕೃತವಾಗಿ ರಚೆನಯಾದ ನೆನಪಿಗಾಗಿ ಈ ದಿನವನ್ನು ಕರ್ನಾಟಕ ರಾಜ್ಯ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಆಚರಣೆಯನ್ನು ಮಾಡುತ್ತಾ ಬಂದಿವೆ. ಈ ಧ್ವಜವು ಶಿಸ್ತು, ಕರ್ತವ್ಯ ನಿಷ್ಠೆ, ಕಾನೂನು ಪಾಲನೆ ಮತ್ತು ರಕ್ಷಣೆಯ ಸಂಕೇತವಾಗಿದೆ. ಸಮಾಜದಲ್ಲಿ ಸಾರ್ವಜನಿಕರು ಮತ್ತು ಪೋಲೀಸರ ನಡುವಿನ ಬಾಂಧವ್ಯವನ್ನು ಬೆಳೆಸಲು ಅತಿ ಮುಖ್ಯವಾಗಿದೆ. ಇದನ್ನು ಪ್ರತಿ ವರ್ಷ ಪೋಲೀಸ್ ಧ್ವಜ ಟಿಕೇಟ್ಗಳನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗುತ್ತದೆ ಎಂದರು.
ನಾನು 1987ರ ಫೆಬ್ರುವರಿಯಲ್ಲಿ ಪೋಲೀಸ್ ಇಲಾಖೆಯಲ್ಲಿ ಪಿ.ಸಿ, ಎಚ್.ಸಿ, ಮತ್ತು ಎ.ಎಸ್.ಐ ಮತ್ತು ಪಿ.ಎಸ್.ಐ ಹುದ್ದೆಯಲ್ಲಿ ಹಲವು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ದಿನಾಂಕ 28-02-2025 ರಂದು ಸಿಂಧನೂರು ನಗರ ಪೋಲೀಸ್ ಠಾಣೆಯಿಂದ ನಿವೃತ್ತಿ ಹೊಂದಿರುತ್ತೇನೆ ಎಂದರು.
ವರದಿ : ಗಾರಲದಿನ್ನಿ ವೀರನಗೌಡ




