ಬಾಗಲಕೋಟೆ:ಕಳುವಾದ ಬೈಕ್ ಹಾಗೂ ಆರೋಪಿಗಳನ್ನು ಪತ್ತೆ ಮಾಡಲು ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧಿಕ್ಷಕರಾದ
ಸಿದ್ದಾರ್ಥ್ ಗೋಯಲ.ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಮಹಾಂತೇಶ್ ಜಿದ್ದಿ ಜಮಖಂಡಿ DSP ಎಸ್ ರೋಷನ್ ಜಮೀರ್ ಅವರ ಮಾರ್ಗದರ್ಶನದಲ್ಲಿಜಮಖಂಡಿ ಸಿಪಿಐ ಮಲ್ಲಪ್ಪ ಮಡ್ಡಿ ಅವರ ನೇತೃತ್ವದಲ್ಲಿ PSI ಅನಿಲ ಕುಂಬಾರ್
ಕ್ರೈಮ್ PSI ಎನ್. ಕೆ. ಕಾಜಗಾರ. ಸಿಬಂದಿಗಳಾದಸಂಗಪ್ಪ ಕೋಟಿ.ಪರಶುರಾಮ್ ಘಾಟಗೆ.ಪ್ರಕಾಶ್ ಹೊಸಮನಿ.ಮುತ್ತಪ್ಪಮಾಂಗ್ ಮಲ್ಲಿಕಾರ್ಜುನ ತಂಬಾಕದ.ಸಿದ್ದು ಕಲಾಟೆ ನಾಗರಾಜ್ ಬಿಸಲದಿನ್ನಿ ಶಂಕರ್ ಆಸಂಗಿ ಆಯ.ಎಂ. ಪೆಂಡಾರಿ ರಾಜಶೇಖರ್ ಮನಗೂಳಿ ಇವರನ್ನು ಒಳಗೊಂಡ ತಂಡ ರಚನೆ ಮಾಡಿ ಕಾರ್ಯಚಾರಣೆ ಕೈಗೊಂಡು
ಆಪಾಧಿತ ಜಮಖಂಡಿ ತಾಲ್ಲೂಕಿನ ಹಂಚಿನಾಳ ಆರ್ ಸಿ.ಗ್ರಾಮದ ಸಿದ್ದಪ್ಪ ಯಲ್ಲಪ್ಪ ಉಪ್ಪಲದಿನ್ನಿ ಅವರನ್ನು ವಶಕ್ಕೆ ಪಡೆದು ಈತನಿಂದ ಜಮಖಂಡಿ ಶಹರ ಠಾಣೆ ಹಾಗೂ ಜಮಖಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಕಳುವಾದ ಅಂದಾಜು 10.ಲಕ್ಷ ರೂಪಾಯಿ ಕಿಮ್ಮತ್ತಿನ ವಿವಿಧ ಕಂಪನಿಯ ಒಟ್ಟು 22.ಬೈಕ್ ವಶಪಡಿಸಿಕೊಂಡು ಆರೋಪಿತನಿಗೆ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದರು.

ಈ ಕಾರ್ಯ ವೈಖರಿಯನ್ನು ಶ್ಲಾಘಿಸಿ ಸೂಕ್ತ ಬಹುಮಾನವನ್ನು ಘೋಷಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಸಿದ್ದಾರ್ಥ್ ಗೊಯಲ್ ತಿಳಿಸಿದರು.
ವರದಿ:ಬಂದೇನವಾಜ ನದಾಫ




