Ad imageAd image

ಗುರುಮಾಠಕಲ್ ಪೊಲೀಸ್ ಠಾಣೆಯಲ್ಲಿ ಲಂಚ ಬೇಡಿಕೆ ಪೊಲೀಸ್ ಸಿಬ್ಬಂದಿ ಅಮಾನತು

Bharath Vaibhav
ಗುರುಮಾಠಕಲ್ ಪೊಲೀಸ್ ಠಾಣೆಯಲ್ಲಿ ಲಂಚ ಬೇಡಿಕೆ ಪೊಲೀಸ್ ಸಿಬ್ಬಂದಿ ಅಮಾನತು
WhatsApp Group Join Now
Telegram Group Join Now

ಗುರುಮಾಠಕಲ್ : ಗುರುಮಾಠಕಲ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ಪೇದೆಗಳಿಬ್ಬರು ಭ್ರಷ್ಟಾಚಾರ ಆರೋಪದಡಿ ಅಮಾನತುಗೊಂಡ ಘಟನೆ ಜರುಗಿದೆ.

ಗುರುಮಠಕಲ್ ಠಾಣೆಯ ಎಎಸ್ಐ ಗೋಪಾಲರೆಡ್ಡಿ ಮತ್ತು ಕಾನ್ಸ್ಟೇಬಲ್ ವಿಶ್ವನಾಥರೆಡ್ಡಿ ಅವರನ್ನು ಇಲಾಖೆಯ ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಆದೇಶ ಹೊರಡಿಸಿದ್ದಾರೆ.

ಪ್ರಕಾರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರರಿಂದ ₹1ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಮುಂಗಡವಾಗಿ ತಲಾ ₹10 ಸಾವಿರ ಸ್ವೀಕರಿಸಿದ್ದಾರೆ ಎಂದು ಅಮಾನತುಗೊಂಡವರ ವಿರುದ್ಧ ಆರೋಪವಿದೆ.

ಜೂನ್ 24 ರಂದು ಪ್ರಕರಣ ಗುರುಮಾಠಕಲ್ ಪೊಲೀಸ್ ಠಾಣೆಯಲ್ಲಿ ದಾಖಲೆ ಯಾಗಿತ್ತು ಆದರೆ ಪ್ರಕರಣ ಆಗಸ್ಟ್ 05 ರಂದು ಇಬ್ಬರು ಪೊಲೀಸ್ ರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಆದೇಶ ಹೊರಡಿಸಿ ಅಮಾನತುಗೊಳಿಸಿದರೆ ಎಂದು ತಿಳಿದು ಬಂದಿದೆ.

ಗುರುಮಾಠಕಲ್ ತಾಲೂಕು ವ್ಯಪ್ತಿಯಲ್ಲಿ ಬರುವ ಮಿನಾಸಪುರ ಗ್ರಾಮದ ವೆಂಕಟರಡ್ಡಿ ಮತ್ತು ಅವರ ಮಗ ಹಣಮಂತರಡ್ಡಿ ಎಂಬುವವರ ಮೇಲೆ ಮೀನಾಸಾಪುರ ಗ್ರಾಮದ ಯಾದಯ್ಯ, ಮಲ್ಲಯ್ಯ, ಗೋಪಿ ಸೇರಿದಂತೆ ಐವರು ಮಾರಣಾಂತಿಕವಾಗಿ ಹೊಡೆದು ಕೈಕಾಲು ಮುರಿದಿದ್ದಾರೆ ಮತ್ತು ಜೀವ ಬೆದರಿಕೆ ಹಾಕಿರುವ ಕುರಿತು ಮೀನಾಸಪುರ ಗ್ರಾಮದ ಅನುಸೂಯಾ ವೆಂಕಟರೆಡ್ಡಿ ಎಂಬುವವರು ದೂರು ನೀಡಿದ್ದರು

ಆರೋಪಿಗಳನ್ನು ಬಂಧಿಸುವ ಕುರಿತು ವಿಚಾರಿಸಿದಾಗ, ದೂರುದರರಿಂದ ₹1 ಲಕ್ಷ ಬೇಡಿಕೆಯಿತ್ತಿದ್ದಾರೆ. ಫೋನ್ ಪೇ ಮೂಲಕ ವಿಶ್ವನಾಥರಡ್ಡಿ ₹10 ಸಾವಿರ ಹಾಗೂ ರಾಜೇಂದ್ರಬಾಬು ಎಂಬುವವರ ಮೊಬೈಲಗೆ ₹10 ಸಾವಿರ ಪೊನ್ ಪೆ ಮೂಲಕ ಪಡೆದಿದ್ದಾರೆ ಎಂದು ದೂರುದಾರೆ ಅನುಸೂಯ ಅವರು ಮೇಲಾಧಿಕಾರಿಗಳಿಗೆ ದೂರುನೀಡಿದ್ದರು. ಅನುಸೂಯ ಅವರು ನೀಡಿದ ದುರಿನ ಕುರಿತು DYSP ಸುರೇಶ್ ಅವರು ವಿಚಾರಣೆ ನಡೆಸಿ ಎಸ್ ಪಿ ಅವರಿಗೆ ವರದಿ ಸಲ್ಲಿಸಿದರು
ದೂರಿನ್ವಯ ತನಿಖೆಗೆ ಆದೇಶಿಸಿದಾಗ ಇದನ್ನು ತನಿಖೆ ಮಾಡಿದ ಡಿವೈಎಸ್ ಪಿ ಅವರು ನೀಡಿದ ವರದಿ ಅದಾರ ಮೇಲೆ ವರದಿ ಮಾಡಲಾಗಿದೆ.

ವರದಿ : ರವಿ ಬುರನೋಳ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!