ಸಿಂಧನೂರು: ನಗರದ ಇಂದಿರಾ ಕಾಲೋನಿಯಲ್ಲಿ ನವಂಬರ್ 01 ರಂದು (ಆರ್ ಹೆಚ್ ಕ್ಯಾಂಪ್ ನಂ 2ರ) ಕಿರಾಣಿ ಅಂಗಡಿ ವ್ಯಾಪಾರಿ ಪ್ರವೀರ್ ಸರ್ದಾರ್ 32 ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಮಾದ್ಯಮಕ್ಕೆ ತಿಳಿಸಿದರು.
ಜಿ. ಚಂದ್ರಶೇಖರ
ಡಿಎಸ್ ಪಿ ಸಿಂಧನೂರು ಇವರ ಮಾರ್ಗದರ್ಶನದಲ್ಲಿ ವೀರಾರೆಡ್ಡಿ ಹೆಚ್. ಪಿ ಐ ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಅಧಿಕಾರಿಯದ ಮೌನೇಶ್ ರಾಥೋಡ್ ಪಿಎಸ್ಐ. ಗ್ರಾಮೀಣ ಠಾಣೆ ಸಿಬ್ಬಂದಿಗಳಾದ ಖಲೀಲ್ ಪಾಶ. ಶರಣಪ್ಪ ರೆಡ್ಡಿ. ಆದಯ್ಯ. ಗೋಪಾಲ. ಹೇಮರೆಡ್ಡಿ. ಅಮರೇಶ್. ವಿಜಯಕುಮಾರ್. ಭಾಷಾ ನಾಯಕ್. ಸಂಗಮೇಶ್. ಅಜಿಧರ್ ಭಾಷಾ. ಸಿಡಿಆರ್ ವಿಭಾಗ ರಾಯಚೂರು ವಿಶೇಷ ತಂಡ ರಚಿಸಿ ಆರೋಪಿ ರಾಜಾ ತಂದೆ ಮೌಲಸಾಬ್ ಆತನ ಸ್ನೇಹಿತ ತಾಜ್ ನನ್ನು ಬಂಧಿಸಿದ್ದಾರೆ.
ವರದಿ: ಬಸವರಾಜ ಬುಕ್ಕನಹಟ್ಟಿ




