ಚನ್ನಮ್ಮ ಕಿತ್ತೂರು:- ತಾಲ್ಲೂಕಿನ ಬೈಲೂರು ಗ್ರಾಮದಲ್ಲಿರುವ ಕೆ.ಎಂ.ಎಫ್ ಸಹಯೋಗದಲ್ಲಿ ರುವ ಹಾಲು ಸಂಗ್ರಹ ಶೈತ್ಯಾಗಾರ ಕೇಂದ್ರಕ್ಕೆ ಅದ್ಯಾಕೋ ಏನೋ ಗೊತ್ತಾಗುತ್ತಿಲ್ಲ ಒಂದಿಲ್ಲೊಂದು ಸಮಸ್ಯೆಯಂತೂ ತಪ್ತಾಯಿಲ್ಲ. ಕಳೆದ ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಹೆಸ್ಕಾಂ ಸಂಸ್ಥೆ ಯವರು ಇದನ್ನು ಬಂದ್ ಮಾಡಿ ಸ್ಥಗಿತಗೊಳಿಸುವುದಕ್ಕೆ ಈ ಘಟಕದ ಮಂಡಳಿಗೆ ನೋಟಿಸ್ ನೀಡಿದ್ದಾರೆ.
ಇನ್ನೂ ಇದರಿಂದ ಬರುವ ಶಬ್ದಕ್ಕೆ ಸಂಬಂಧಿಸಿದಂತೆ ಪಲ್ಯೂಶನ್ ಬೋರ್ಡ್ ನವರು ವಿದ್ಯುತ್ ಇಲಾಖೆಗೆ ಪತ್ರ ಬರೆದು ಸದರಿ ಹೆಸ್ಕಾಂ ನ ಅಭಿಯಂತರರು ಇದಕ್ಕೆ ನೀಡಿರುವ ವಿದ್ಯುತ್ ಸಂಪರ್ಕ ವನ್ನು ಕಡಿತ ಗೊಳಿಸಲಾಗುವುದು ಎಂದು ನೋಟಿಸ್ ನೀಡಿರುವುದರಿಂದ ಏನೋ ಮಾಡ್ಬೇಕು ಎಂಬುದೇ ದಿಕ್ಕೇ ತೋಚುತ್ತಿಲ್ಲಾ, ಅಷ್ಟಕ್ಕೂ ಈ ಬೈಲೂರು ಗ್ರಾಮದಲ್ಲಿ 2012 ನೇ ಇಸವಿಯಲ್ಲಿ ಸ್ಥಾಪಿತವಾದ ಈ ಸಮೂಹ ಹಾಲು ಸಂಗ್ರಹ ಘಟಕಕ್ಕೆ ಈ ಭಾಗದ 19 ಹಳ್ಳಿಗಳ ರೈತರ ಹಾಲು ಇಲ್ಲಿ ಸಂಗ್ರಹವಾಗುತ್ತದೆ. ಇನ್ನೂ ಇದರಿಂದ ಅದೆಷ್ಟೋ ರೈತ ಕುಟುಂಬಗಳು ಇದನ್ನು ನಂಬಿಕೊಂಡು ಜೀವನ ನಡೆಸುತ್ತಿವೆ.
ಆದ್ದರಿಂದ ಇದನ್ನು ಬಂದ್ ಮಾಡಿದರೇ ಸಾಕಷ್ಟು ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ನಿನ್ನೆ ಬೈಲೂರು ಗ್ರಾಮದ ಗ್ರಾಮಸ್ಥರು
ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರನ್ನು ಭೇಟಿಯಾಗಿ ಈ ಸಮಸ್ಯೆ ಬಗ್ಗೆ ಚರ್ಚೆ ಮಾಡಿದರು. ಸದರಿ ಈ ಸಮಸ್ಯೆಯ ಬಗ್ಗೆ ಸಮಗ್ರ ವರದಿ ತಯಾರಿಸಿದ ರಾಜ್ಯ ಉಪ ಸಂಪಾದಕ ಬಸವರಾಜುರವರು
ಇದರ ಬಗ್ಗೆ ಕೆ.ಎಂ.ಎಫ್ ಬೆಳಗಾವಿ ವಿಭಾಗದ ಜಿಲ್ಲಾಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಯವರು, ಕೆ.ಎಂ.ಎಫ್ ಬೆಳಗಾವಿ ಜಿಲ್ಲೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಪ್ಪ ಹಾಗೂ ಬೆಳಗಾವಿ ಹೆಸ್ಕಾಂ ಅಧೀಕ್ಷಕ ಅಭಿಯಂತರರು ಹಾಗೂ ನಿರ್ದೇಶಕರಾದ ಬಸವರಾಜು ಪರವಣ್ಣನವರ್ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವುದೇ ಎಂಬುದನ್ನು ಕಾದುನೋಡಬೇಕಿದೆ
ವರದಿ :- ಬಸವರಾಜು.