ಸೇಡಂ: ತಾಲೂಕಿನ ಶೀಲಾರಕೊಟ್ ಗ್ರಾಮದ ನಿವಾಸಿ ವೆಂಕಟಪ್ಪ ತಂದೆ ಕಿಷ್ಟಪ್ಪ ಸುಗ್ಗಾಲ್ ಅವರ ೫ ವರ್ಷ ಚಿತ್ರರಂಗದ ಪ್ರಯಾಣದ ನಂತರ ಅನೇಕ ಪ್ರಯತ್ನಗಳ ಫಲವಾಗಿ ಒಂದೊಳ್ಳೆ ಅವಕಾಶವನ್ನು ಅವೇರ್ ಮೀಡಿಯಾ ವರ್ಕ್ಸ್ ಸಂಸ್ಥೆ ವತಿಯಿಂದ ನಿರ್ದೇಶಕನಾಗಿ ಅವಕಾಶ ಕಲ್ಪಿಸಿಕೊಟ್ಟಿದೆ. ಸಂಸ್ಥೆಯ ಮುಖ್ಯಸ್ಥರಾದ ವಿ,ಶ್ರೀನಿಧಿ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ.
ಚಿತ್ರದ ಮೊದಲ ಕಾರ್ಯಕ್ರಮವಾದ ಚಿತ್ರಕಥೆ ಪೂಜೆಯನ್ನು ಹೈದರಾಬಾದ್ ನ ಮಾಧಪುರ್ ರಾಮಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನಟ ದೇವರ ನರೇಶ್, ನಿರ್ಮಾಪಕರಾದ ವಿ.ಶ್ರೀನಿಧಿ, ಎಡಿಟರ್ ವಿಶ್ವನಾಥ್ ಕುಚನಪಲ್ಲಿ, ಕ್ಯಾಮರಾಮನ್ ವಿಶ್ವಾಸ್ ದುಬಾಸಿ, ನಟ ಶಿವಕುಮಾರ್, ನಿರ್ದೇಶಕರಾದ ವೆಂಕಟಪ್ಪ ಕೆ ಸುಗ್ಗಾಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.