ಮುಂಬೈ: ಪೂನಂ ಪಾಂಡೆ . ಪಡ್ಡೆ ಹುಡುಗರಿಗೆ ಈ ಹೆಸರು ಹೊಸದೇನಲ್ಲ. ಈಗಾಗಲೇ ಸಾಕಷ್ಟು ಬೋಲ್ಡ್ ಅವತಾರಗಳ ಮೂಲಕ ಹಲ್-ಚಲ್ ಎಬ್ಬಿಸಿರುವ ನಟಿ. ಹೀಗಾಗಿ ಈಕೆಯ ಹಾಟ್ ಫೋಟೋಶೂಟ್ ಗಳು, ಹಸಿ ಬಿಸಿ ವಿಡಿಯೋಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತದೆ.ಈ ಮಧ್ಯೆ ಇದೀಗ ಪೂನಂ ಮತ್ತೆ ಸದ್ದು ಮಾಡುತ್ತಿದ್ದಾರೆ.
ಸದ್ಯ ಪೂನಂ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ ಬಿಟ್ರೆ ಬೆಳ್ಳಿ ಪರದೆಯಲ್ಲಿ ಮಿಂಚಿ ಅದ್ಯಾವುದೋ ಕಾಲವಾಯಿತು. ನಶಾ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಪೂನಂ ಗೆ ಆ ನಂತರ ಹೆಚ್ಚು ಅವಕಾಶಗಳು ದೊರೆತಿಲ್ಲ.ಈ ಮಧ್ಯೆ ʻಲವ-ಕುಶʼ ರಾಮಲೀಲಾʼ ನಾಟಕದಲ್ಲಿ ಮಂಡೋದರಿ ಪಾತ್ರಕ್ಕೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ ಎನ್ನಲಾಗಿದೆ.
ಈ ವರ್ಷ ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನಡೆಯಲಿರುವ ನಾಟಕ ʻರಾಮಲೀಲಾʼದಲ್ಲಿ ರಾವಣನ ಪತ್ನಿ ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಅವರನ್ನ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ರಾವಣನಾಗಿ ಅಬ್ಬರಿಸಲು ನಟ ಆರ್ಯ ಬಬ್ಬರ್ ಸಜ್ಜಾಗಿದ್ದಾರೆ.ಆದ್ರೆ ಈ ಬೆಳವಣಿಗೆ ಹಿಂದೂಪರ ಸಂಘಟನೆಗಳ ಕಣ್ಣು ಕೆಂಪಾಗಿಸಿದೆ.
ವಿಶ್ವಹಿಂದೂ ಪರಿಷತ್ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಸದಾ ತುಂಡುಡುಗೆ, ಅಶ್ಲೀಲ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಇಂಥಹ ನಟಿಯನ್ನು ಮಂಡೋದರಿ ರೀತಿಯ ಪೌರಾಣಿಕ ಪಾತ್ರಕ್ಕೆ ಆಯ್ಕೆ ಮಾಡಿರುವುದು ಸರಿಯಲ್ಲ..ಹೀಗಾಗಿ ಕೂಡಲೇ ಆಯ್ಕೆಯನ್ನು ಕೈಬಿಡುವಂತೆ ಸಂಘಟನೆಗಳು ಒತ್ತಾಯಿಸಿವೆ.




