ಮೈಸೂರು :ಜಿಲ್ಲೆ HDಕೋಟೆ ತಾಲೂಕು ನಂಜುಂಡಪ್ಪನವರ ವರದಿಯ ಪ್ರಕಾರ ರಾಜ್ಯದಲ್ಲೇ ಹಿಂದುಳಿದ ತಾಲೂಕು ಆಗಿದೆ.ತಾಲೂಕಿನ ಡಿ ಬಿ ಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ. ಮೈಸೂರು ಮಾನಂದವಾಡಿ ರಸ್ತೆಗೆ ಡಾಂಬರ ಹಾಕಲು
ಕೋಟಿಗಟ್ಟಲೆ , ಸರ್ಕಾರ ಹಣ ಬಿಡುಗಡೆ ಮಾಡಿದೆ.ಟೆಂಡರ್ ಕರೆದು ರಸ್ತೆ ಕಾಮಗಾರಿ ಪ್ರಾರಂಭಿಸಿದೆ , ಆದರೆ ಈ ಭಾಗದಲ್ಲಿ
ಅತಿ ಹೆಚ್ಚು ಆದಿವಾಸಿಗಳು ವಾಸಿಸುತ್ತಿದ್ದು ಮತ್ತು ದಟ್ಟ ಅರಣ್ಯದಿಂದ ಕೂಡಿದೆ ಇದನ್ನು ಅರಿತ ಗುತ್ತಿಗೆದಾರ
ಇಲ್ಲಿ ನಾವು ಮಾಡುವ ಕಾಮಗಾರಿಯನ್ನು ಯಾರು ಗಮನಿಸುವುದಿಲ್ಲ ಎಂದು ಭಾವಿಸಿ ಡಾಂಬರ ಹಾಕುತ್ತಿದ್ದರು.ಇದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಇಲ್ಲಿ ಹಾಕುತ್ತಿರುವ ಡಾಂಬರ್ ಕಳಪೆ ಕಾಮಗಾರಿ ಹಾಗಾಗಿ ಗುಣಮಟ್ಟದ ಡಾಂಬರೀಕರಣ ಮಾಡಬೇಕು.

ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಸರ್ಕಾರ ಕಣ್ಣು ಮುಚ್ಚಿ ಕೂರಬಾರದು.ಗುಣಮಟ್ಟದ ಕಾಮಗಾರಿ ಮಾಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಸುಬ್ರಮಣ್ಯ, ನಾರಾಯಣ,
ಮಣಿಯ, ಮನೋಜ್, ನಾಗೇಶ್, ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಹಾಗೂ ಯುವಕರು ಇದ್ದರು.
ವರದಿ:ಆನಂದ್ ಕುಮಾರ್ ವಡಗೆರೆ




