ಸಿಂಧನೂರು: ತಾಲೂಕಿನ ಗಾಂಧಿನಗರದ ವಿನಾಯಕ ಟ್ರೇಡರ್ಸ್ ಮಳಿಗೆಯಿಂದ ರೈತರಿಗೆ ಕಳಪೆ ಬೀಜಗಳನ್ನು ಮಾರಾಟ ಮಾಡಿದ್ದು ಬೆಳೆ ಹಂತದಲ್ಲಿ ಸಂಪೂರ್ಣ ಬೆಳೆ ಕಮರಿ ಹೋಗಿದ್ದು ರೈತರು ಕೋಪಗೊಂಡು ನೂರಾರು ಸಂಖ್ಯೆ ರೈತರಿಂದ ಕಳಪೆ ಬೀಜ ವಿತರಣೆ ಮಾಡಿದ ಮಳೆಗೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತ ಪಡಿಸಿದರು.
ಜನನಿ ಬಿ -2 ಎಂಬ ತಳಿ ಬತ್ತದ ಬೀಜ ಕೊಟ್ಟಿದ್ದು ಸರಿಯಾಗಿ ಬೆಳೆಯದೆ ಹಾಳಾಗಿದ್ದು ಕಂಗಾಲಾದ ರೈತರಿಂದ ವಿನಾಯಕ ಟ್ರೇಡರ್ಸ್ ಮಾಲೀಕರ ಮಳಿಗೆಗೆ ಮುತ್ತಿಗೆ ಹಾಕಿ ಬೆಳೆ ನಷ್ಟ ಪರಿಹಾರ ಕೊಡಬೇಕೆಂದು ಪ್ರತಿಭಟಿಸುತ್ತಿರುವ ಹಿನ್ನೆಲೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಉಪ ತಸಿಲ್ದಾರ್ ಚಂದ್ರಶೇಖರ್ ಹಟ್ಟಿ. ಡಿವೈಎಸ್ಪಿ ಚಂದ್ರಶೇಖರ್ ಜಿ. ಯಾವುದೇ ಅಹಿತಕರ ಘಟನೆ ಜರಗದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಲು ಸ್ಥಳದಲ್ಲಿ ಠಿಕಾಣೆ ಹೂಡಿದ್ದರು.
ವರದಿ: ಬಸವರಾಜ ಬುಕ್ಕನಹಟ್ಟಿ




