ಹಾವೇರಿ:-ಈ ಸಾರಿ ಶಿಗ್ಗಾಂವಿ ಮತ್ತು ಸವಣೂರು ವಿಧಾನಸಭಾ ಕ್ಷೇತ್ರದದಲ್ಲಿ ಉಪಚುನಾವಣೆಯ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ.
ಕಾಂಗ್ರೆಸ್ನ ಪ್ರಬಲ ಅಭ್ಯರ್ಥಿಯಾಗಿರುವ ಯಾಸಿರ್ ಅಹಮದ್ ಖಾನ್ ಪಠಾಣ್ ರವರ ಪ್ರಚಾರಕ್ಕೆ ಮತ್ತು ಜನಬೆಂಬಲಕ್ಕೆ ತತ್ತರಿಸುತ್ತಿದೆ ಬಿಜೆಪಿ ನಾಯಕರ ಗೆಲ್ಲುವ ಉತ್ಸಾಹ.ಈ ಹಿಂದಿನ. ಚುನಾವಣೆಯಲ್ಲಿ ಯಾಸ್ಸಿರ್ ಅಹಮದ್ ಖಾನ್ ಪಠಾನ್ ರವರು ಬಸವರಾಜ್ ಬೊಮ್ಮಾಯಿ ವಿರುದ್ಧ ಸುಮಾರು 36000 ಮತಗಳಿಂದ ಪರಾಜೀತಗೋoಡಿದ್ದರು.
ಈ ಸಾರಿಯ ಉಪಚುನಾವಣೆಯಲ್ಲಿ ಅಷ್ಟೇ ಮತಗಳಿಂದ ಬಸವರಾಜ್ ಬೊಮ್ಮಾಯಿ ರವರ ಪುತ್ರ ಭರತ್ ಬೊಮ್ಮಾಯಿ ವಿರುದ್ಧ ಜಯಭೇರಿ ಬಾರಿಸಿರುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ.ಶಿಗ್ಗಾoವ್ ಕ್ಷೇತ್ರದ ಕಾಂಗ್ರೆಸ್ ನಾಯಕರಾಗಿರುವ ಪಟಾನ್ ರವರ ಅಬ್ಬರದ ಪ್ರಚಾರ ನೋಡಿದರೆ ಈ ಸಾರಿಯ ಉಪಚುನಾವಣೆಯಲ್ಲಿ ಬಿಜೆಪಿ ಗೆ ಟಕ್ಕರ್ ಕೊಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.
ನಾಳೆಯ ಕಾಂಗ್ರೆಸ್ನ ಅಬ್ಬರದ ಪ್ರಚಾರಕ್ಕೆ ಶಿಗ್ಗಾಂವಿ ಕ್ಷೇತ್ರಕ್ಕೆ ಜಮೀರ್ ಅಹ್ಮದ್ ಮತ್ತು ಕಾಂಗ್ರೆಸ್ನ ಪ್ರಬಲ ಮುಖಂಡರು ಆಗಮಿಸುತ್ತಿದ್ದಾರೆ.
ಸುಮಾರು ವರ್ಷಗಳಿಂದ ಬಿಜೆಪಿ ನಾಯಕರ ಆಳ್ವಿಕೆಯಲ್ಲಿದ್ದ ಶಿಗ್ಗಾಂವಿ ಮತ್ತು ಸವಣೂರು ವಿಧಾನಸಭಾ ಕ್ಷೇತ್ರ ಈ ಉಪಚುನಾವಣೆಯ ನಂತರ ಕಾಂಗ್ರೆಸ್ ನಾಯಕರ ಆಳ್ವಿಕೆಗೆ ಬರುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ.
ವರದಿ ರಮೇಶ್ ತಾಳಿಕೋಟಿ




