ಬೆಂಗಳೂರು: ಬೆಂಗಳೂರಿನಂತಹ ನಗರಗಳಲ್ಲಿ ಅಜಾಗರೂಕ ಚಾಲನೆ, ನಿಯಮ ಉಲ್ಲಂಘಟನೆಗಳು ಮಾಮೂಲಿ ಎನ್ನಬಹುದು. ಈ ಬಗ್ಗೆ ಸಾಕಷ್ಟು ಘಟನೆಗಳು ನಿತ್ಯ ಕೇಳಿ ಬರುತ್ತಿವೆ. ಇಂತಹ ಘಟನೆಗಳಿಂದ ಮಹಿಳಾ ಚಾಲಕಿಯರಿಗೆ ಸುರಕ್ಷತೆ ಇಲ್ಲವಾ ಎಂಬ ಭಾವನೆ ಮೂಡುತ್ತಿದೆ. ಅಜಾಗರೂಕ ಚಾಲನೆ ಬಗ್ಗೆ ಪ್ರಶ್ನಿಸಿದ್ದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆದ ಮಹಿಳಾ ಚಾಲಕಿಗೆ ವ್ಯಕ್ತಿಯೊಬ್ಬ ಅಶ್ಲೀಲ ಸನ್ನೆ ಮಾಡಿದ್ದಾನೆ.
ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಅಶ್ಲೀಲ ಸನ್ನೆ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಹೌದು, ಬೆಂಗಳೂರಿನಲ್ಲಿ ಮೈಸೂರು ರಸ್ತೆಯ ಗೋಪಾಲನ್ ಮಾಲ್ ಬಳಿ ಈಚೆಗೆ ಘಟನೆ ನಡೆದಿದೆ.
ಗೋಪಾಲ್ ಮಾಲ್ ಬಳಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷತಾ ರವಿಕುಮಾರ್ ಅವರು ವಾಹನದಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ಅಶ್ಲೀಲವಾಗಿ ಸನ್ನೆ ಮಾಡಿದ ವ್ಯಕ್ತಿ ಹರ್ಷ ಎಂದು ಗುರುತಿಸಲಾಗಿದೆ. ಹರ್ಷ ಅಜಾಗರೂಕ ಚಾಲನೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಅಕ್ಷತಾ ಅವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹರ್ಷ ಅಶ್ಲೀಲ ಕೈ ಬೆರಳ ಸನ್ನೆ ಮಾಡಿದ್ದಾನೆ.
ಈ ಘಟನೆ ಕುರಿತು ಅಕ್ಷತಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್) ವಿಡಿಯೋ ಪೊಸ್ಟ್ ಹಂಚಿಕೊಂಡಿದ್ದಾರೆ. ಅವರಿಗಾದ ಅಹಿತಕರ ಅನುಭವ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಚಾಮರಾಜಪೇಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ದೂರು ದಾಖಲಾದ ಕೂಡಲೇ ಹರ್ಷನನ್ನು ವಶಕ್ಕೆ ಪಡೆದಿದ್ದಾರೆ.
ಖ್ಯಾತ ಗಾಯಕಿ ಅರ್ಚನಾ ಉಡುಪಗೆ ಏಕಾಏಕಿ ಧ್ವನಿ ಹೋಗಿದ್ದೇಗೆ? ಹರ್ಷ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಲ್ಲದೇ, ಅಕ್ಷತಾ ಅವರ ಮುಂದೆ ಅಶ್ಲೀಲ ಸನ್ನೆ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಹರ್ಷಾರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಈ ತ್ವರಿತ ಸ್ಪಂದನೆ, ಕಾರ್ಯಕ್ಕೆ ಅಕ್ಷತಾ ಅವರು ಅಭಿನಂದಿಸಿದ್ದಾರೆ.




