Ad imageAd image
- Advertisement -  - Advertisement -  - Advertisement - 

ಅಂಗನವಾಡಿ ಕೇಂದ್ರಗಳಲ್ಲಿ ಸಪ್ಟಂಬರ್ ತಿಂಗಳಿನಾದ್ಯಂತ ಪೋಶಣ್ ಮಾಸಾಚರಣೆ

Bharath Vaibhav
ಅಂಗನವಾಡಿ ಕೇಂದ್ರಗಳಲ್ಲಿ ಸಪ್ಟಂಬರ್ ತಿಂಗಳಿನಾದ್ಯಂತ ಪೋಶಣ್ ಮಾಸಾಚರಣೆ
WhatsApp Group Join Now
Telegram Group Join Now

ಇಳಕಲ್:- ರಾಜ್ಯದ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಮಾಸಾಚರಣೆ ಕಾರ್ಯಕ್ರಮಗಳು ನಿರಂತರವಾಗಿ ನಡೆದಿವೆ. ಆದರೆ ಇಳಕಲ್ ನಗರದಲ್ಲಿ ಪೋಶಣ್ ಮಾಸಾಚರಣೆಯ ಸದ್ದೇ ಕೇಳುತ್ತಿಲ್ಲ.

ಇಡೀ ದೇಶದಾದ್ಯಂತ ಸೆಪ್ಟಂಬರ್ ತಿಂಗಳು ಪೂರ್ತಿ ಅಂಗನವಾಡಿ ಕೇಂದ್ರಗಳಲ್ಲಿ ಪೋಶಣ್ ಅಭಿಯಾನ್ ಅಥವಾ ಪೋಶಣ್ ಮಾಸಾಚರಣೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ಹದಿ ಹರೆಯದ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವ ಮತ್ತು ಪೌಷ್ಟಿಕತೆ ಬಗ್ಗೆ ಜಾಗೃತಿಯನ್ನು ಮೂಡಿಸುವುದೇ ಪೋಶಣ್ ಮಾಸಾಚರಣೆಯ ಪ್ರಮುಖ ಉದ್ದೇಶವಾಗಿದೆ.

ಈ ಪೋಶಣ್ ಮಾಸಾಚರಣೆಯನ್ನು ಹೇಗೆ ಆಚರಿಸಬೇಕು? ಹೇಗೆ ನಡೆಸಬೇಕು? ಎಂಬ ಬಗ್ಗೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ. ಸಪ್ಟೆಂಬರ್ 1 ರಿಂದ 30ನೇ ತಾರೀಖಿನವರೆಗೆ ಏನೇನು ಮಾಡಬೇಕು ಎಂಬುದರ ಬಗ್ಗೆ ಸವಿವರವಾದ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿದೆ.

ಸದರಿ ಕಾರ್ಯಕ್ರಮಗಳ ವಿವರದ ಪಟ್ಟಿಯನ್ನು ಸರಕಾರ, ರಾಜ್ಯದ ಪ್ರತಿಯೊಂದು ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿಗೆ ತಲುಪಿಸಿದೆ. ಅಷ್ಟೇ ಅಲ್ಲ ಮಸಾಚರಣೆಯ ಪಟ್ಟಿಯಲ್ಲಿ ವಿವರಿಸಿದ ಪ್ರಕಾರ, ಪ್ರತಿ ಅಂಗನವಾಡಿ ಕೇಂದ್ರದಲ್ಲಿ ಹಾಗೂ ಅಂಗನವಾಡಿ ವೃತ್ತಗಳಲ್ಲಿ ಕಾರ್ಯಕ್ರಮಗಳ ಆಯೋಜನೆ ಮಾಡಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮಕ್ಕಳಲ್ಲಿ ಹಾಗೂ ಮಕ್ಕಳ ಪೋಷಕರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ನಿರ್ದೇಶನ ನೀಡಿದೆ.

ಪೋಶಣ್ ಮಾಸಾಚರಣೆ ಆರಂಭವಾಗಿ 12 ದಿನಗಳು ಕಳೆಯುತ್ತಿದ್ದರೂ ಇಳಕಲ್ ನಗರದ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ಮಾಸಾಚರಣೆಯ ಯಾವ ಕಾರ್ಯಕ್ರಮಗಳು ನಡೆದಿಲ್ಲ.

ಇಳಕಲ್ ನಗರದಲ್ಲಿ ಸುಮಾರು 60 ಅಂಗನವಾಡಿ ಕೇಂದ್ರಗಳಿದ್ದು, ಅಂಗನವಾಡಿ ಫಲಾನುಭವಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೋಗ್ಯದ ಸ್ಥಿತಿಗತಿಗಳು ಏನಿವೆ? ಅಪೌಷ್ಟಿಕತೆ ನಿವಾರಣೆಯಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ನಡೆಸಬೇಕಾದಂತ ಎಷ್ಟೋ ಕಾರ್ಯಕ್ರಮಗಳಿವೆ. ಆದರೆ ಅವು ನಡೆಯುತ್ತಿಲ್ಲ.

ಮೊದಲನೆಯದಾಗಿ ಹೇಳಬೇಕೆಂದರೆ, ಇಳಕಲ್ ನಗರದಲ್ಲಿನ ಅಂಗನವಾಡಿ ಕೇಂದ್ರಗಳು ಸಮರ್ಪಕವಾಗಿ, ಸಮಯಕ್ಕೆ ಸರಿಯಾಗಿ ಅಂದರೆ ಮುಂಜಾನೆ 9:30 ರಿಂದ ಸಂಜೆ 4.30ರವರೆಗೆ ನಡೆಯುವುದೇ ಇಲ್ಲ.
ಅಂಗನವಾಡಿಗಳನ್ನು ನಡೆಸಿಕೊಂಡು ಹೋಗುವ ಕಾರ್ಯಕರ್ತರ ಮೇಲೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ನಿಯಂತ್ರಣವೇ ಇಲ್ಲವಾಗಿದೆ. ಹೀಗಾಗಿ ಸರಕಾರದ ನಿರ್ದೇಶನದ ಯಾವ ಕಾರ್ಯಕ್ರಮಗಳು ಇಳಕಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವುದಿಲ್ಲ.

ಜಿಲ್ಲೆಯ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಇಳಕಲ್ ನಗರದಲ್ಲಿ ಅಂಗನವಾಡಿ ಕೇಂದ್ರಗಳು ಸಮರ್ಪಕವಾಗಿ ನಡೆಯಬೇಕು ಮತ್ತು ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸವಂತೆ ಕ್ರಮ ಕೈಗೊಳ್ಳಬೇಕಿದೆ.

ವರದಿ :-ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!