ಇಲಕಲ್: ವಾರ್ಡ್ ನಂಬರ್ 02 ದುರ್ಗಂದೇವಿ ನಗರದ ಅಂಗನವಾಡಿ ಕೇಂದ್ರದಲ್ಲಿ ಮಾಸಾಚರಣೆ ಆಚರಣೆ. ಸೆಪ್ಟಂಬರ್ ತಿಂಗಳ ಅಂತ್ಯವಾಗಿ ಪ್ರತಿದಿನ ಒಂದೊಂದು ಕಾರ್ಯಕ್ರಮ ಇರುತ್ತವೆ. ಆ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳ ಜೊತೆ ಹಾಗೂ ಪಾಲಕರ ಜೊತೆ ಸಭೆ ನಡೆಸುತ್ತೇವೆ ಸರ್ಕಾರಿ ಮೆಂಟೇಸರಿ ಎಂಬ ಹೆಸರಿನಲ್ಲಿ ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜಿ ಯುಕೆಜಿ ನಡೆಸುವಂತಹ ಸರ್ಕಾರ ಆದೇಶ ಹೊರಡಿಸಿದೆ ಆ ವಿಷಯವನ್ನು ಮಕ್ಕಳ ಪಾಲಕರಿಗೆ ಮಾಹಿತಿ ತಿಳಿಸಲಾಯಿತು ಮತ್ತು ಮಕ್ಕಳಿಗೆ ಗರ್ಭಿಣಿಯರಿಗೆ ಬಾಣಂತಿಯರಿಗೆ ಪ್ರತಿದಿನ ಹಸಿರು ತಪ್ಪಲಪಲ್ಲೇ ಮತ್ತು ಹಾಲು ಮೊಟ್ಟೆ ಸೇವಿಸುವಂತೆ ಹೇಳಲಾಯಿತು ಅಂಗನವಾಡಿಯಲ್ಲಿ ಕೂಡ ಗರ್ಭಿಣಿಯರಿಗೆ ಮೊಟ್ಟೆ ಬಾಣಂತಿಯರಿಗೆ ಮೊಟ್ಟೆ ಹಾಲು ಮತ್ತು ಮೂರರಿಂದ ಆರು ವರ್ಷದ ಅಂಗನವಾಡಿಗೆ ಬಂದಂತ ಮಕ್ಕಳಿಗೂ ಕೂಡ ಮಂಗಳವಾರ ಶುಕ್ರವಾರ ಮೊಟ್ಟೆ ಬೇಯಿಸಿ ಕೊಡುತ್ತೇವೆ ಎಂದು ತಾಯಂದಿರಿಗೆ ತಿಳಿಸಲಾಯಿತು ಮತ್ತು ಕಿಶೋರಿಯರಿಗೆ 11 ರಿಂದ ೧೮ ವರ್ಷ ಮಕ್ಕಳಿಗೆ ರಕ್ತ ಹೀನತೆ ಆಗದಂತೆ ಅದನ್ನು ತಡೆಗಟ್ಟುವ ವಿಧಾನ ಹೇಳಲಾಯಿತು ಮತ್ತು ಹುಟ್ಟಿದ ಕೂಸಿಗೆ ಅಂಗನವಾಡಿಯಲ್ಲಿ ಪ್ರತಿ ತಿಂಗಳ ರೋಗನಿರೋಧಕ ಚುಚ್ಚುಮದ್ದು ಹಾಕಿಸುವ ಕಾರ್ಯಕ್ರಮದ ಬಗ್ಗೆ ಹೇಳಲಾಯಿತು ಈ ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಕೌಸರ್ ಟಕ್ಕೆದ ಮತ್ತು ಯಲ್ಲಮ್ಮ ವಗ್ಗಾ ಅವರು ಭಾಗ ವಹಿಸಿದ್ದರು.
ವರದಿ : ದಾವಲ್ ಶೇಡಂ