Ad imageAd image

ಶಿಕ್ಷಣಕ್ಕೆ ಬಡತನ ಎಂದಿಗೂ ಅಡ್ಡಿಯಾಗಬಾರದು : ಪೀರಪ್ಪಾ ಔರಾದೆ

Bharath Vaibhav
ಶಿಕ್ಷಣಕ್ಕೆ ಬಡತನ ಎಂದಿಗೂ ಅಡ್ಡಿಯಾಗಬಾರದು : ಪೀರಪ್ಪಾ ಔರಾದೆ
WhatsApp Group Join Now
Telegram Group Join Now

——-ಯರನಳ್ಳಿಯಲ್ಲಿ ಶಿವಮ್ ಫೌಂಡೇಶನ್ ವತಿಯಿಂದ ಉಚಿತ ನೋಟ್‌ ಬುಕ್‌ ವಿತರಣೆ

ಬೀದರ : ಸತತ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಸಾಧಕರಾಗಬಹುದು ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಬಡತನ ಅಡ್ಡಿಯಾಗಬಾರದು ಎಂದು ಶಿವಮ್ ಫೌಂಡೇಶನ್ ಅಧ್ಯಕ್ಷ ಪೀರಪ್ಪಾ ಔರಾದೆ ಹೇಳಿದರು.

ತಾಲ್ಲೂಕಿನ ಯರನಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆವರಣದಲ್ಲಿ ಸ್ವ.ಮಾರುತಿ ಔರಾದೆ ಅವರ ಪುಣ್ಯಸ್ಮರಣೆಯ ನಿಮಿತ್ತ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಚೆನ್ನಾಗಿ ವ್ಯಾಸಂಗ ಮಾಡಬೇಕು, ಸಂಘಸಂಸ್ಥೆಗಳು ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ಗುರುತಿಸಿ ಬಡಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಬೇಕು ಎಂದರು.

ಶಿವಮ್ ಫೌಂಡೇಶನ್ ವತಿಯಿಂದ ನೋಟ್ ಬುಕ್ ವಿತರಣೆ, ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಉತ್ತಮ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ, ಕುರಿಗಾಹಿಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷರಾದ ಸುರೇಶ ಚನ್ನಶೆಟ್ಟಿ ಮಾತನಾಡಿ ದುಡಿದು ಗಳಿಸಿದ್ದರಲ್ಲಿ ಸ್ವಲ್ಪಭಾಗವನ್ನು ಸಮಾಜದಲ್ಲಿ ಅವಶ್ಯಕತೆ ಇರುವವರಿಗೆ ನೀಡುವುದರಿಂದ ದೇವರು ಕೂಡ ಮೆಚ್ಚುತ್ತಾನೆ, ಬಡ ಮಕ್ಕಳ ಬಾಳಿಗೆ ನೀವು ನೀಡುವ ಈ ಸಹಾಯವು ಅವರಿಗೆ ದಾರಿದೀಪವಾಗುತ್ತದೆ ಈ ನಿಟ್ಟಿನಲ್ಲಿ ಶಿವಮ್ ಫೌಂಡೇಶನ್ ಪೀರಪ್ಪಾ ಔರಾದೆ ಅವರ ನೇತೃತ್ವದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಮಾಡುತ್ತಿರುವ ಸಾಮಾಜಿಕ ಸೇವೆ ಶ್ಲಾಘನೀಯವಾಗಿದೆ ಇಂಥವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದರು.

ವಕೀಲರಾದ ಗುರುನಾಥ ರಾಜಗೀರಾ ಮಾತನಾಡಿ ತಾನು ಕಲಿತ ಶಾಲೆಗೆ ಸಿಸಿಟಿವಿ ಅಳವಡಿಸಿ, ಆ ಶಾಲೆ ಮತ್ತು ಸುತ್ತಮುತ್ತಲಿನ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸುವುದರ ಜೊತೆಗೆನೆ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ಶಿವಮ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳುತ್ತಿರುವುದು ಇತರೆ ಸಂಘ ಸಂಸ್ಥೆಗಳಿಗೆ ಪ್ರೇರಣೆಯಾಗಿದೆ ಎಂದರು.

ಈ ಸಂದರ್ಭದಲಿ ಐ.ಎನ್.ಓ ಸಂಸ್ಥೆ ಜಿಲ್ಲಾದ್ಯಕ್ಷರಾದ ಗೋರಖನಾಥ ಕುಂಬಾರ, ಫ್ರೌಡ ಶಾಲೆ ಮುಖ್ಯಗುರಗಳಾದ ಮಚಿಂದರನಾಥ್ ಗಾಯಕವಾಡ, ಎಸ್.ಡಿ.ಎಮ್.ಸಿ ಅಧಕ್ಷರಾ ಸಲೀಂ ಖಾನ, ಸಿ.ಆರ್.ಪಿ ಗಳಾದ ಬಾಲಾಜಿ ಬಿರಾದಾರ, ರಾಮಶೆಟ್ಟಿ ಕೆಂಚಾ ಪ್ರಾಥಮಿಕ ಶಾಲೆ ಮುಖ್ಯಗುರುಗಳಾದ ಮನೋಹರ್ ಬಾಬಾಶೆಟ್ಟಿ, ಗ್ರಾಮ ಪಂಚಾಯತ ಅಧ್ಯಕ್ಷ ಅಬಾಸ್ ಖಾನ, ವೈಜಿನಾಥ ಬಚಪಳ್ಳಿ, ಬಾಬುರಾವ ಮೇಕರ್, ವಿಜಯಕುಮಾರ ಅನಕಲೆ ಪ್ರಭು ಸಂಗಾವಿ, ಜ್ಯೋತಿಶ್ ಔರದೆ, ಶಾಮಸುಂದರ್ ಖಾನಪುರ್ಕರ್, ಸೋಮಶೇಖರ ಮೈಸುರ, ರಾಜ ಟಗರೂ, ಶ್ರೀಕಾಂತ ಪಾಂಡ್ರೆ, ಶಿವು ರೋಧನೂರ್, ಈಶ್ವರ ಸ್ವಾಮಿ ಧರ್ಮೇಂದರ ಯರನಳ್ಳಿ, ನಾಗನಾಥ ಔರದೆ, ದೇವಿಂದರ ಸಾಧು, ಬಿಸ್ಮಿಲಖಾನ್, ಶಿವಕುಮಾರ ಕಾರ್ಮುಂಗೆ, ಮಾಡಪ್ಪ ಚಾರೆ ಸೇರಿದಂತೆ ಪ್ರೌಢ ಹಾಗೂ ಪ್ರಾಥಾಮಿಕ ಶಾಲೆಯ ಶಿಕ್ಷಕರು,ಮಕ್ಕಳು ಮತ್ತು ಗ್ರಾಮಸ್ಥರಿದ್ದರು. ದೈಹಿಕ ಶಿಕ್ಷಕ ಸಂಜು ಸುರ್ಯವಂಶಿ ಸ್ವಾಗತಿಸಿದರೆ ರಮೇಶ ಬೀದರ ಅವರು ನಿರೂಪಿಸಿ ವಂದಿಸಿದರು.

ವರದಿ: ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!