ಬಾಲಕಿಯೊಂದಿಗೆ ವಿವಾಹವಾದ ಪ್ರಕರಣ
ಚಿಕ್ಕೋಡಿ: ಬೆಳಗಾವಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷನೊಬ್ಬ 15 ವರ್ಷದ ಬಾಲಕಿಯನ್ನು ವಿವಾಹವಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಸ್ಸಾಪುರ ಗ್ರಾಮ ಇದು. ಬಸ್ಸಾಪುರ ಗ್ರಾಪಂ ಅಧ್ಯಕ್ಷ ಭೀಮಶಿ ಕಾಲಿಮಣಿ ಎಂಬಾತನಿಂದ ಈ ಕೃತ್ಯ ನಡೆದಿದೆ. ಬಾಲ್ಯ ವಿವಾಹ ಮಾಡಿಕೊಂಡ ಗ್ರಾಪಂ ಅಧ್ಯಕ್ಷ ಭೀಮಶಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹುಕ್ಕೇರಿ ತಾಲೂಕಿನ ಯಮಕನಮರಡಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. 2023ರ ನ.5 ರಂದು ಅಪ್ರಾಪ್ತೆ ಜೊತೆಗೆ ಭೀಮಶಿ ಕಾಲಿಮಣಿ ವಿವಾಹವಾಗಿದ್ದ. ಅಧ್ಯಕ್ಷ ಬಂಧನದ ಭೀತಿಯಿಂದ ಪತ್ನಿಯ ನಕಲಿ ಜನನ ಪ್ರಮಾಣ ಪತ್ರ ವೈರಲ್ ಮಾಡಿದ್ದ ಎನ್ನಲಾಗಿದೆ. ಕೃತ್ಯ ಎಸಗಿರುವುದು ದೃಢವಾದ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷನ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ.
ಭಕ್ತಿ ಭಾವದಿಂದ ಜರುಗಿದ ಗಣೇಶ ವಿಸರ್ಜನೆ

ಚಿಕ್ಕಬಳ್ಳಾಪುರ: ಚೇಳೂರು ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಗಣೇಶ್ ವಿಸರ್ಜನೆ ವಿಜೃಂಭಣೆ ಹಾಗೂ ಭಕ್ತಿ ಭಾವದಿಂದ ಜರುಗಿತು. ಎಲ್ಲ ಗ್ರಾಮಸ್ಥರು ಭಾಗಿಯಾಗಿ ಯಶಸ್ವಿ ಗೊಳಿಸಿದರು. ತಮಟೆ ವಾದ್ಯಗಳೊಂದಿಗೆ ನೃತ್ಯಗಳನ್ನು ಮಾಡಿಕೊಂಡು ಪಟಾಕಿ ಸಿಡಿಸಿ, -ಬಣ್ಣ ಗಳನ್ನು ಹಾಕಿಕೊಂಡು ಸಂಭ್ರಮಿಸಿದರು. ಎಚ್ ವಿ ನಾರಾಯಣ ಸ್ವಾಮಿ, ಹರೀಶ್, ಮರೀಪಿರೆಡ್ಡಿ, ಮೋಹನ್ ರೆಡ್ಡಿ, ಜಯಸೂರ್ಯ, ಮಂಜು, ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ :ಯಾರಬ್. ಎಂ
ಖಾಸಗಿ ಶಾಲೆಗಳನ್ನ ಮೀರಿಸುವಂತಿದೆ ಈ ಗ್ರಾಮ ಶಾಲೆ

ಅಥಣಿ: ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಭಾಗದಲ್ಲಿರುವ ಕನ್ನಡ ಶಾಲೆ.
ಸಂಬರಗಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಕನ್ನಡ ಶಾಲೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮ.
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ.
9 ಸುಸಜ್ಜಿತವಾದ ಕಟ್ಟಡ,7 ಜನ ಶಿಕ್ಷಕ ಶಿಕ್ಷಕಿಯರನ್ನ ಒಳಗೊಂಡಿರುವ ಶಾಲೆ.
ಖಾಸಗಿ ಶಾಲೆಗಳಿಗೆ ಟಕ್ಕರ ಕೊಡುವಂತಿದೆ ಶಾಲೆಯ ಆಟದ ಮೈದಾನ ಹಾಗೂ ವಾತಾವರಣ.
ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುತ್ತಿರುವ ಶಿಕ್ಷಕರು, ಹೆಚ್ಚಾಗುತ್ತಿರುವ ಶಾಲಾ ಮಕ್ಕಳ ದಾಖಲಾತಿ. ಈ ವರ್ಷ ಡಿಜಿಟಲೀಕರಣ ಶಿಕ್ಷಣ ನೀಡಲು ಮುಂದಾಗಿರುವ ಶಿಕ್ಷಕರು
ವರದಿ: ಸುಕುಮಾರ ಮಾದರ
——————————————-
ಶಿಕ್ಷಕರು ಕ್ರೀಡಾಕೂಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲಿ’

ಮೊಳಕಾಲ್ಮೂರು: ಪ್ರತಿಯೊಬ್ಬ ಶಿಕ್ಷಕರು ಆಟ ಪಾಠದ ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಲು ಇದು ಒಂದು ಒಳ್ಳೆಯ ಅವಕಾಶ ಅದೇ ರೀತಿ ಶಿಕ್ಷಕರು ಮೊದಲು ಕಲಿತು ಮಕ್ಕಳಿಗೆ ಪರಿಪೂರ್ಣವಾಗಿ ತಿಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಿರ್ಮಲಾದೇವಿ ಯವರು ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ 25 -26 ನೇ ಸಾಲಿನ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರದೀಪ್ ಕುಮಾರ್ ಎಸ್ ಪಿ. ಬಿ ಆರ್ ಸಿ ತಿಪ್ಪೇಸ್ವಾಮಿ, ಅಶೋಕ್ ಟಿಎಂ. ಅನಿಸಿಕೆಗಳನ್ನು ತಿಳಿಸಿದರು. ಶಿಕ್ಷಕರಾದ ಗುರುಪ್ರಸಾದ್, ಶ್ವೇತ,ನಾಗಭೂಷಣ ಚಂದ್ರಶೇಖರ್, ರಹೀಂ, ಸುಜಾತಾ ತಿಪ್ಪೇಸ್ವಾಮಿ, ಸುನಿತಾ, ಜಾಕಿರ್ ಹುಸೇನ್ ನಾಗಭೂಷಣ್, ಟಿ.ಪಿ. ಇ ಓ ಅಬ್ರಾಮ್ ಸುಕನ್ಯಾ ಸರೋಜಮ್ಮ ಉಪಸ್ಥಿತರಿದ್ದರು.
ವರದಿ: ಪಿ.ಎಂ. ಗಂಗಾಧರ
————————————————————————————————-
ರೇವಗ್ಗಿ ಸರ್ಕಾರಿ ಕಾಲೇಜು ಯಾವ ಖಾಸಗಿ ಕಾಲೇಜಿಗೂ ಕಮ್ಮಿಯಿಲ್ಲ
ಕಲ್ಬುರ್ಗಿ :ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು KK0174 ರೇವಗ್ಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಖಾಸಗಿ ಕಾಲೇಜನ್ನೂ ಮೀರುಸುತ್ತೆ.
ಕಾಲೇಜಿನಲ್ಲಿ ಸುಂದರವಾದ ವಾತಾವರಣ, ನುರಿತ ಉಪನ್ಯಾಸಕರು ಹಾಗೂ ಪ್ರತಿಯೊಂದು ಚಟುವಟಿಕೆಗಳಲ್ಲಿ ಉಪನ್ಯಾಸಕರು ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಹೊರಗೆ ಹಾಕುವಂತ ಕೆಲಸ. ಕಾಲೇಜಿನ ವಿಶೇಷತೆ ಏನೆಂದರೆ ಶನಿವಾರ ವಿದ್ಯಾರ್ಥಿಗಳಿಗೆ ಯೋಗ ತರಗತಿ, ಪ್ರತಿ ವಾರಕ್ಕೆ ರಸಪ್ರಶ್ನೆ ಕಾರ್ಯಕ್ರಮ, ಪ್ರತಿ ತಿಂಗಳಿಗೊಮ್ಮೆ ವಿಶೇಷ ಉಪನ್ಯಾಸವನ್ನೂ ನೀಡಲಾಗುತ್ತೆ.
ಈ ಕಾಲೇಜಿಗೆ ಅನೇಕ ಮಹನಿಯರು ಕಾಣಿಕೆಗಳನ್ನು ಸಲ್ಲಿಸಿದ್ದು, ಕಾಲೇಜಿನ ಪ್ರಾಂಶುಪಾಲರ ರಾಜು ಗಂಗಾಧರ, ಸಿಬ್ಬಂದಿಗಳಾದ ಸಿದ್ದರಾಮ ಪುಲ್ಲರ್ ಮತ್ತು ಕುಮಾರಿ ಲಕ್ಷ್ಮಿ ಮೇಡಂ ಗುರು ನಂಜೇಶ್ವರ, ಸಂಜೀವ, ಕುಮಾರ್ ಪಾಟೀಲ, ಕಾಣಿಕೆ ನೀಡಿದ ಮಹನೀಯರನ್ನು ಅಭಿನಂದಿಸಿದ್ದಾರೆ.
ವರದಿ: ಸುನಿಲ ಸಲಗರ್




