Ad imageAd image

ಪೊಲೀಸ್ , ಪತ್ರಕರ್ತರಿಗಾಗಿ ಪಿ.ಪಿ.ಸಿ ವಾಲಿಬಾಲ್ ಟೂರ್ನಮೆಂಟ್

Bharath Vaibhav
ಪೊಲೀಸ್ , ಪತ್ರಕರ್ತರಿಗಾಗಿ ಪಿ.ಪಿ.ಸಿ ವಾಲಿಬಾಲ್ ಟೂರ್ನಮೆಂಟ್
WhatsApp Group Join Now
Telegram Group Join Now

ಮೊಳಕಾಲ್ಮುರು:- ಕ್ರೀಡೆಯಲ್ಲಿ ಸೋಲು ಮತ್ತು ಗೆಲುವನ್ನು ಸ್ಪರ್ಧಾಳುಗಳು ಸಮಾನವಾಗಿ ಸ್ವೀಕರಿಸಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ವಸಂತ ಅಸೋದೆ ಹೇಳಿದರು.ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಬುಧವಾರದಂದು ಪೋಲಿಸ್ ಇಲಾಖೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ ಪಿ.ಪಿ.ಸಿ ವಾಲಿಬಾಲ್ ಟೂರ್ನಮೆಂಟ್ ಗೆ ಚಾಲನೆ ನೀಡಿ ಮಾತನಾಡಿದರು.

ಪೊಲೀಸ್ ಮತ್ತು ಪತ್ರಕರ್ತರು ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗಿರಬೇಕಾದರೆ ಕ್ರೀಡೆಯ ಪಾತ್ರ ಪ್ರಮುಖವಾಗಿದೆ, ಪೊಲೀಸ್ ಮತ್ತು ಪತ್ರಕರ್ತರಿಗೆ ಒತ್ತಡದ ಬದುಕಿಗೆ ಕೊಂಚ ರಿಲೀಫ್ ಬೇಕಿದೆ, ಹಾಗಾಗಿ ಸೌಹಾರ್ದಯುತವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.

ವಾಲಿಬಾಲ್ ಸ್ಪರ್ಧೆಯಲ್ಲಿ ಇಬ್ಬರ ತಂಡಗಳ ಮಧ್ಯೆ ತೀವ್ರವಾದ ಹೋರಾಟದ ಮನೋಭಾವಕ್ಕೆ ಸಾಕ್ಷಿಯಾಯಿತು. ಅತ್ಯುತ್ತಮ ಟೀಮ್ ವರ್ಕ್, ಸಮನ್ವಯ ಮತ್ತು ಆಟದ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಮೊದಲ ಪಂದ್ಯದಲ್ಲಿ ಪೊಲೀಸ್ ಟೀಮ್ ವಿಜಯಶಾಲಿಯಾದರೆ, ಅತ್ಯುತ್ತಮ ಪ್ರದರ್ಶನ ಮತ್ತು ತಂಡದ ಒಗ್ಗಟ್ಟಿನ ಬಲದಿಂದ ಎರಡನೇ ಪಂದ್ಯದಲ್ಲಿ ಪತ್ರಕರ್ತರ ಟೀಂ ವಿಜಯಶಾಲಿಯಾಯಿತು. ಪ್ರತಿಯೊಂದು ಪಂದ್ಯಗಳು ರೋಚಕ ತಿರುವುಗಳನ್ನು ಪಡೆಯುವ ಮೂಲಕ ಆಟಗಾರರು ಅದ್ಭುತ ಪ್ರದರ್ಶನವನ್ನು ನೀಡಿದರು.

ಟೂರ್ನಿಯಲ್ಲಿ ಮೊಳಕಾಲ್ಮುರು ಪೋಲೀಸ್ ಠಾಣೆಯ ಪಿಎಸ್‌ಐ ಜಿ. ಪಾಂಡುರಂಗ,ರಾಂಪುರ ಪಿಎಸ್ ಐ ಮಹೇಶ್ ಹೊಸಪೇಟೆ,ಪೊಲೀಸ್ ಸಿಬ್ಬಂದಿಗಳಾದ ಶ್ರೀಧರ್, ಬಜ್ಜಪ್ಪ, ಮಂಜುನಾಥ, ಖಾದರ್ ಬಾಷ, ಶಿವಾನಂದ್,ಹರೀಶ್, ಕೃಷ್ಣ, ಮಾರಣ್ಣ .ಲಕ್ಷ್ಮಿಪತಿ, ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ,ಕೊಂಡ್ಲಹಳ್ಳಿ ಮಹದೇವ್. ಎಸ್. ರಾಜಶೇಖರ್. ಕೆ. ಈರಣ್ಯ, ಜಿ. ಶ್ರೀನಿವಾಸ್ ಮೂರ್ತಿ ಬಿ.ಜಿ.ಕೆರೆ ಬಸವರಾಜ್, ಡಿ. ಎನ್. ಗೋವಿಂದಪ್ಪ, ಎಚ್. ಮಹಾಂತೇಶ, ಟಿ. ರುದ್ರೇಶ್, ಕೆಂದೋಳಿ ಮಲ್ಲಿಕಾರ್ಜುನ, ಪಿ. ಎಂ. ಗಂಗಾಧರ, ಕೊಂಡ್ಲಹಳ್ಳಿ ಅಜ್ಜಪ್ಪ,ಚಂದ್ರು, ಮಂಜುನಾಥ, ಗೋಪಾಲ, ಸಿದ್ದೇಶ್,ತಿಪ್ಪೇಶ್ ಇನ್ನು ಹಲವರಿದ್ದರು.ಪಂದ್ಯದ ತೀರ್ಪುಗಾರರಾಗಿ ಪ್ರಸನ್ನ ಹಾಗೂ ಜಾಕಿರ್, ಓಬ್ಬಣ್ಣ ಶಿಕ್ಷಕರು ವಹಿಸಿಕೊಂಡಿದ್ದರು.

ವರದಿ:-  ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!