ಬೀದರ್ : ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರ ನಿರ್ದೇಶನದಂತೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಅವರೊಂದಿಗೆ ಅ.06ರಂದು ಭಾಲ್ಕಿ ಮತ್ತು ಬೀದರ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಸದಸ್ಯತಾ ಅಭಿಯಾನ ಪರಿಶೀಲನೆ ನಡೆಸಿ, ಯಶಸ್ವಿಗೊಳಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದರು.
ಈ ವೇಳೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸಮಗ್ರ ಅಭಿವೃದ್ಧಿಗಾಗಿ ನಿರಂತರ ಶ್ರಮ ವಹಿಸುತ್ತಿದ್ದಾರೆ. ಅವರ ಕೈ ಬಲಪಡಿಸಲು ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕಿದೆ. ಈ ವಿಷಯವನ್ನು ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕೆಂದು ಸೂಚಿಸಿದರು.
ಪಕ್ಷದ ರಾಜ್ಯಾಧ್ಯಕ್ಷರು ಭಾಲ್ಕಿ ಮತ್ತು ಬೀದರ ವಿಧಾನಸಭಾ ಕ್ಷೇತ್ರಕ್ಕೆ ಹೋಗಬೇಕೆಂದು ಹೇಳಿದ್ದರಿಂದ ಎರಡೂ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಬಿಜೆಪಿ ಸದಸ್ಯತಾ ಅಭಿಯಾನವು ಒಬ್ಬ ವ್ಯಕ್ತಿ ಮತ್ತು ಪಕ್ಷದ ಕೆಲಸವಲ್ಲ ಇದು ದೇಶಕ್ಕಾಗಿ ಮಾಡುತ್ತಿರುವ ಸೇವೆ ಎಂದು ಭಾವಿಸಬೇಕು. ಪ್ರಧಾನ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಪ್ರಭಾವ ಎತ್ತರಕ್ಕೇರಿದೆ. ದೇಶವು ಹಿಂದೆಂದೂ ಕಾಣದ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದ್ದು, ಭಾರತ ವಿಶ್ವಗುರು ಆಗುವತ್ತ ಮುನ್ನುಗ್ಗುತ್ತಿದೆ. ಪ್ರಧಾನಿಯವರ ಕೆಲಸಗಳಿಗೆ ನಾವೆಲ್ಲ ಕೈ ಜೋಡಿಸಬೇಕು. ಪಕ್ಷವನ್ನು ಬಲಪಡಿಸುವ ಮೂಲಕ ಪ್ರಧಾನಿಯವರಿಗೆ ಶಕ್ತಿ ತುಂಬಬೇಕಿದೆ. ಈ ದಿಶೆಯಲ್ಲಿ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರು ಚುರುಕಿನಿಂದ ಕೆಲಸ ಮಾಡಬೇಕೆಂದು ಹೇಳಿದರು.
ಮನೆ-ಮನೆಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಬೇಕು. ಶ್ರಮ ವಹಿಸಿದರೆ ಮಾತ್ರ ಅಭಿಯಾನ ಯಶಸ್ವಿಯಾಗಲು ಸಾಧ್ಯ. ದೇಶದಲ್ಲಿ 10 ಕೋಟಿ ಸದಸ್ಯರನ್ನು ಸೇರ್ಪಡೆ ಮಾಡಲಾಗುವುದೆಂದು ಪ್ರಧಾನಿಯವರು ಘೋಷಿಸಿದ್ದಾರೆ. ಸದಸ್ಯತಾ ಅಭಿಯಾನಕ್ಕೆ ದೇಶಾದ್ಯಂತ ಭರ್ಜರಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಅಭಿಯಾನಕ್ಕೆ ಆನ್‌ಲೈನ್ ಸ್ಪರ್ಷ ನೀಡಿರುವುದರಿಂದ ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ. ನೀವೆಷ್ಟು ಹೊಸ ಸದಸ್ಯರನ್ನು ಸೇರ್ಪಡೆ ಮಾಡಿದ್ದೀರಿ ಎಂಬುದು ಅಂಗೈಯಲ್ಲಿ ಪತ್ತೆ ಮಾಡಬಹುದು. ಈ ಅಭಿಯಾನವನ್ನು ಬೀದರ ಉತ್ತರ ಹಾಗೂ ಭಾಲ್ಕಿ ಕ್ಷೇತ್ರದಲ್ಲಿಯೂ ಯುದ್ದೋಪಾದಿಯಲ್ಲಿ ನಡೆಸಬೇಕು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಮಾತನಾಡಿ, ಪಕ್ಷದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಬೀದರ ಜಿಲ್ಲೆ ಉತ್ತಮ ಸಾಧನೆ ತೋರಿಸುತ್ತಿದೆ. ಬೀದರ ಉತ್ತರ ಮತ್ತು ಭಾಲ್ಕಿ ಕ್ಷೇತ್ರಗಳಲ್ಲಿ ಅಭಿಯಾನ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಔರಾದ ಶಾಸಕರಿಗೆ ಉಸ್ತುವಾರಿ ನೀಡಲಾಗಿದೆ. ನಿಗದಿತ ಗುರಿ ಸಾಧಿಸಿ, ರಾಜ್ಯದಲ್ಲಿ ಬೀದರ ನಂ.1 ಮಾಡಲು ಎಲ್ಲರು ಪರಿಶ್ರಮ ವಹಿಸಬೇಕು ಎಂದರು.
ಹೆಚ್ಚು ಸದಸ್ಯತ್ವ ಮಾಡಿದವರಿಗೆ ಸನ್ಮಾನ: ಬೀದರಿನ ಲಾವಣ್ಯ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಸದಸ್ಯತ್ವ ಪರಿಶೀಲನಾ ಸಭೆಯಲ್ಲಿ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು 500 ಕ್ಕಿಂತ ಹೆಚ್ಚು ಸದಸ್ಯತ್ವ ಮಾಡಿದ ವೀರೇಶ್ ಸ್ವಾಮಿ, ನಿತೀನ್ ನಾವಲಕೆಲೆ, ಬಸವರಾಜ ಧೊರಿ, ಕೈಲಾಶ ಕಾಜಿ ಅವರನ್ನು ಸನ್ಮಾನಿಸಿ ಹುರಿದುಂಬಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಂಸದರಾದ ಭಗವಂತ ಖೂಬಾ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಪ್ರಮುಖರಾದ ಈಶ್ವರ ಸಿಂಗ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ, ಕಿರಣ ಪಾಟೀಲ, ಮಾಧವ ಹಾಸೂರೆ, ಮಂಡಲ ಅಧ್ಯಕ್ಷರಾದ ವೀರಣ್ಣ ಕಾರಬಾರಿ, ಶಶಿಧರ ಹೊಸಳ್ಳಿ, ದೀಪಕ ಗಾದಗೆ, ಪ್ರಮುಖರಾದ ಶಿವರಾಜ ಗಂದಗೆ, ಬಾಬುರಾವ ಕಾರಬಾರಿ,ವಿಜಯಕುಮಾರ ಪಾಟೀಲ ಗಾದಗಿ, ಸುರೇಶ ಬಿರಾದಾರ, ಬಾಬು ವಾಲಿ, ಸುಧೀರ ಕಾಡಾದಿ, ಗುರುನಾಥ ರಾಜಗೀರಾ, ರಾಜೇಂದ್ರ ಪೂಜಾರಿ, ರಾಜಕುಮಾರ ಚಿದ್ರಿ, ಗೋವಿಂದರಾವ ಬಿರಾದಾರ, ದಿಗಂಬರರಾವ ಮಾನಕಾರಿ,
ಉಲ್ಲಾಸಿನಿ ಮುಧಾಳೆ, ರಾಜಶೇಖರ ನಾಗಮೂರ್ತಿ, ಗುರುನಾಥ ಜಾಂತಿಕರ್, ರೇವಣಸಿದ್ದಪ್ಪ ಜಲಾದೆ, ರಾಜಕುಮಾರ ನೆಮತಬಾದ, ಹಣಮಂತರಾವ ಪಾಟೀಲ ಬನ್ನಳ್ಳಿ, ರಾಜಕುಮಾರ ಚಿದ್ರಿ, ಸುಭಾಷ ಮಡಿವಾಳ, ಲುಂಬಿಣಿ ಗೌತಮ್ ಸೇರಿದಂತೆ ಇತರರಿದ್ದರು.
ವರದಿ : ಸಂತೋಷ ಬಿಜಿ ಪಾಟೀಲ