ಯಳಂದೂರು: 30-5-2025ರಂದು ಯಳಂದೂರು ತಾಲ್ಲೋಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಶ್ರೀ ಎಸ್.ಪ್ರಭುಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಕಛೇರಿಯಲ್ಲಿ ನೆಡೆಸಲಾಯಿತು.
ತಾಲ್ಲೋಕು ಪಂಚಾಯಿತಿ ಕಾರ್ಯನಿರ್ವಾಹ ಅಧಿಕಾರಿ ಉಮೇಶ್ ರವರು ಸಭೆಯ ನೆಡೆವಲಿಯನ್ನು ತಿಳಿಸಿದರು.
ಸಭೆಯಲ್ಲಿ ಸದ್ಯಸರುಗಳು ಗ್ಯಾರಂಟಿ ಯೋಜನಗಳು ಪಲಾನುಭವಿಗಳಿಗೆ ತಲುಪಿದೆಯೋ ಇನ್ನೆಷ್ಟು ಜನರಿಗೆ ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ತಲುಪುತಿಲ್ಲವೆಂದು ಅಧಿಕಾರಿಗಳ ಜೊತೆ ಚರ್ಚಿಸಿದರು.
ಸದ್ಯಸರದ ಶಿವರಾಜ್ ಮಾತನಾಡಿ ಕೆಲವು ಗ್ರಾಮಗಲ್ಲಿ ವಿದ್ಯುತ್ ಕಂಬಗಳು ಬೀಳುವ ಸ್ಥಿತಿಯಲಿದೆ ಕೆಲವರಿಗೆ ಹಳ್ಳಿಗಳ್ಳಿ ಗೃಹ ಜ್ಯೋತಿ ಭಾಗ್ಯ ಸಿಗುತ್ತಿಲ್ಲ ಅಂತವರು ಗುರುತಿಸಿ ಎಂದು ತಿಳಿಸಿದರು.
ತಾಲ್ಲೋಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ರವರು ಮಾತನಾಡಿ ನಾವು ಗ್ಯಾರಂಟಿ ಯೋಜನೆಗಳು ಪ್ರತಿಯೊಂದು ಹಳ್ಳಿಗಳ್ಳಿ ಪದವಿ ಪಡೆದ ವಿದ್ಯಾರ್ಥಿಗಳ್ನು ತಿಳಿದುಕೊಳ್ಳಿ ಅವರಿಗೆ ಯುವನಿಧಿ ದೊರೆಯುವಂತೆ ಮಾಡಬೇಕು, ಕೆಲವು ಪದವಿದಾರರು ಬೇರೆ ಜಿಲ್ಲೆಗಲ್ಲಿ ಓದುವುದರಿಂದ ನಮಗೆ ತಿಳಿದುಕೊಳ್ಳುವುದು ಕಷ್ಟ ಅದರಿಂದ ನಾವು ಗ್ರಾಮ ಭಾಗದಲಿ ಹೋಬಳಿಯ ಮಟ್ಟದಲ್ಲಿ ಸಭೆ ನೆಡೆಸಬೇಕು ಎಂದರು.

ಅಧ್ಯಕ್ಷರು ಪ್ರಭುಪ್ರಸಾದ್ ಮಾತನಾಡಿ ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲ್ಪಿಸುವ ನಿಟ್ಟಿನಲ್ಲಿ ಜೂನ್ ತಿಂಗಳ ರಂದು ಹೋಬಳಿಯ ಮಟ್ಟದ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ನೆಡೆಸುತೇವೆ ಜನರಿಗೆ ಎಷ್ಟರ ಮಟ್ಟಿಗೆ ತಲುಪಿದೆ ಎಂದು ತಿಳಿಯುತದೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ಯಾರಂಟಿ ಸದ್ಯಸರುಗಳಾದ ಶಿವರಾಜ್ ಹೆಚ್ ಎಂ, ವಿಶ್ವ, ಸಚಿನ್, ಶಿವಣ್ಣ, ನಂಜುಂಡಸ್ವಾಮಿ, ವಿರೂಪಾಕ್ಷ, ಮಂಜುನಾಥ್, ನಾಗಣ್ಣ, ಪ್ರಭುಶಂಕರ್, ಅಸ್ಲಾಂಪಾಷ ನಾಗರಾಜು, ಮಹೇಶ್, ಅನಿತಾ, ಭಾಗ್ಯ,ಹಾಗೂ ಅಧಿಕಾರಿಗಳು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




