Ad imageAd image

ಉಗಾರದಲ್ಲಿ ನಡೆದ ಪ್ರಜಾದ್ವನಿ 2 ಜನಸಮಾವೇಶ

Bharath Vaibhav
ಉಗಾರದಲ್ಲಿ ನಡೆದ ಪ್ರಜಾದ್ವನಿ 2 ಜನಸಮಾವೇಶ
WhatsApp Group Join Now
Telegram Group Join Now

ಅಥಣಿ :-ಉಗಾರದಲ್ಲಿ ನಡೆದ ಪ್ರಜಾದ್ವನಿ 2 ಜನಸಮಾವೇಶಕ್ಕೆ ಆಗಮಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ.
ಮತ್ತು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ನಂತರ ಪ್ರಜಾದ್ವನಿ 2 ಜನಸಮಾವೇಶಕ್ಕೆ ಭಾಗವಹಿಸಿ,

ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಮೊದಲು ಪಂಚ ಗ್ಯಾರಂಟಿ ಯೋಜನೆಯ ಆಶ್ವಾಸನೆಯನ್ನು ಜನರಿಗೆ ನೀಡಿತ್ತು ಅಧಿಕಾರಕ್ಕೆ ಬಂದ 100 ದಿನಗಳ ಒಳಗೆ ಆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಯಾವುದಾದರು ಸರಕಾರವಿದ್ದರೆಯ ಅದು ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ಸರಕಾರ ಎಂದು ಹೇಳಿದರು,

ಬಿಜೆಪಿಯವರು ಜನರಿಗೆ ಸುಳ್ಳು ಭರವಸೆಗಳ ಮಹಾಪೂರವನ್ನೇ ಹೇಳುತ್ತಾ ಬರುತ್ತಿದ್ದೆ, ಗಂಗಾ ದಿಂದ ಕಾವೇರಿ ,ಕಾವೇರಿಯಿಂದ – ಕೃಷ್ಣಾ ನದಿ ಜೋಡಣೆ ಮಾಡಿ ಅಟಲ್ ಬಿಹಾರಿ ವಾಜಪೇಯಿಯವರ ಕನಸನ್ನು ನನಸು ಮಾಡುತ್ತೇವೆ,ದೇಶದಲ್ಲಿ ಬುಲ್ಲೆಟ್ ರೈಲುಗಳನ್ನು ತರುತ್ತೇವೆ ಎಂದವರು ದೇಶದಲ್ಲಿ ಒಂದು ಕೂಡಾ ಬುಲ್ಲೆಟ್ ರೈಲು ಸಂಚಾರ ಮಾಡಲಿಲ್ಲ ,ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದವರು ಆದಾಯ ದ್ವಿಗುಣ ಮಾಡುವ ಬದಲು ರೈತರು ಬಳಸುವ ರಸ-ಗೊಬ್ಬರಗಳ ಬೆಲೆಯನ್ನು ದ್ವಿಗುಣ ಮಾಡಿದ್ದಾರೆ

ಬಿಜೆಪಿಯವರು ಜನರ ಬಳಿ ಬಂದು ಮತ ಕೇಳುವ ಯಾವುದೇ ತರಹದ ನೈತಿಕ ಹಕ್ಕು ಇಲ್ಲ,
ಈ ಹಕ್ಕು ಯಾರಿಗಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಹೇಳಿದರು
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಜಯಗೊಳಿಸಬೇಕು ಎಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ರಾಜ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಸಚಿವರಾದ ವಿನಯ ಕುಲಕರ್ಣಿ,ಬೈರತಿ ಸುರೇಶ್ಶಾಸಕರಾದ ಗಣೇಶ ಹುಕ್ಕೇರಿ, ರಾಜು ಕಾಗೆ ,ಮಹೀಂದ್ರ ತಮ್ಮಣ್ಣವರ,ಕಾಂಗ್ರೆಸ್ ಪಕ್ಷದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೇ ಕಾಂಗ್ರೇಸ್ ಪಕ್ಷದ ಮಾಜಿ ಸಚಿವರು,ಮಾಜಿ ಶಾಸಕರು ಹಿರಿಯ ನಾಯಕರು, ಕಾರ್ಯಕರ್ತರು ಹಾಗೂ ಅಪಾರ ಜನಸ್ತೋಮದಿಂದ ಈ ಬೃಹತ ಜನರ ಸಮಾವೇಶ.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!