Ad imageAd image

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಸೂತ್ರಧಾರಿಗಳು ಸಿದ್ದರಾಮಯ್ಯ, ಡಿ.ಕೆ.ಶಿ : ದೇವರಾಜೇಗೌಡ ಆರೋಪ 

Bharath Vaibhav
ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಸೂತ್ರಧಾರಿಗಳು ಸಿದ್ದರಾಮಯ್ಯ, ಡಿ.ಕೆ.ಶಿ : ದೇವರಾಜೇಗೌಡ ಆರೋಪ 
WhatsApp Group Join Now
Telegram Group Join Now

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ವಕೀಲ ದೇವರಾಜೇಗೌಡ ಅವರಿಗೆ ಆಮಿಷ ಮಾಡಿರೋ ಆಡಿಯೋವನ್ನು ರಿಲೀಸ್ ಮಾಡಿ, ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಕೊಡಲಾಗಿದೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ಸೂತ್ರಧಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಪ್ರಮುಖ ಸೂತ್ರಧಾರಿಗಳು ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮಗೆ ಆಮಿಷವೊಡ್ಡಿದ ಸಂಭಾಷಣೆಯ ಆಡಿಯೋವನ್ನು ರಿಲೀಸ್ ಮಾಡಿದರು.

ಇದಷ್ಟೇ ಅಲ್ಲದೇ ರಾಜ್ಯ ಸರ್ಕಾರ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಗೌಪ್ಯ ಸಭೆ ಮಾಡಲಾಗುತ್ತಿದೆ. ಗೌಪ್ಯ ಸಭೆ ನಡೆಸಿ ಯಾರು ಯಾರನ್ನ ಆರೋಪಿಗಳನ್ನ ಮಾಡಬೇಕು ಅನ್ನೋದನ್ನ ಸೂಚನೆ ಕೊಟ್ಟಿದ್ದಾರೆ

.ನನ್ನ ಜೀವನದ ಹೋರಾಟ ಇದ್ದಿದ್ದು ಹಾಸನ ಜಿಲ್ಲೆಯ ಪ್ರಭಾವಿ ರಾಜಕಾರಣಿ ಗಳ ವಿರುದ್ಧವಾಗಿದೆ. ಅದನ್ನೇ ಅಸ್ತ್ರವಾಗಿ ಇಟ್ಟುಕೊಂಡು ಕೆಲ ಕಿಡಿಗೇಡಿ ರಾಜಕಾರಣಿಗಳು ವಾಮ ಮಾರ್ಗದಲ್ಲಿ ಹೋಗಲು ಮುಂದಾಗಿದ್ದಾರೆ ಎಂಬುದಾಗಿ ಹೇಳಿದರು.

ನನ್ನ ಸಾಕ್ಷೀ ಹೇಳಿಕೆಯಲ್ಲಿ ಕಹಿ ಸತ್ಯಗಳನ್ನ ವಿಚಾರಣೆ ಸಂದರ್ಭದಲ್ಲಿ ಇಟ್ಟಿದ್ದೇನೆ. ಇದರಲ್ಲಿ ಕೆಲ ಆರೋಪಿಗಳನ್ನ ಬಂಧಿಸಲಾಗಿದೆ. ಅಶ್ಲೀಲ ವಿಡಿಯೋ ತಡೆಯಾಜ್ಞೆ ಇದ್ರು ಕೂಡ, ಅಶ್ಲೀಲ ವಿಡಿಯೋ ಹಂಚಿಕೆ ಮಾಡಿರುವ ಸಂಬಂಧ ದೂರು ದಾಖಲಾಗಿದೆ. ಇದರಲ್ಲಿ ದೇವರಾಜೇಗೌಡ ಅವರದ್ದು ಪಾತ್ರ ಏನು? ಎಂದು ಪ್ರಶ್ನಿಸಿದರು.

ಒಬ್ಬ ಕೊಲೆಗಾರ ವಕೀಲನ ಹತ್ರ ಬಂದಾಗ, ನಮ್ಮ ವಕೀಲ ವೃತ್ತಿಯಲ್ಲಿ ಏನು ಮಾಡಬೇಕು ಅದನ್ನ ಮಾಡಿದ್ದೇನೆ. ಕಾರು ಚಾಲಕ ಕಾರ್ತಿಕ್ ನನ್ನ ಕಚೇರಿಗೆ ಬಂದು, ಒಂದು ಪೆನ್ ಡ್ರೈವ್ ಹಾಗೂ ‌ಕೆಲ ಡಾಕ್ಯುಮೆಂಟ್ ಕೊಡ್ತಾರೆ. ಅಶ್ಲೀಲ ವಿಡಿಯೋ ಕ್ಲೀಪ್ ಹಾಗೂ ಪತ್ರಿಕೆ ಪೇಪರ್ ಅನ್ನ ನಮ್ಮ ವಕೀಲರಿಗೆ ತಂದು ಕೊಡ್ತಾರೆ.

ಇದಕ್ಕೆ ಪೂರಕವಾದ ಕೆಲ ಡಾಕ್ಯುಮೆಂಟ್ ‌ಕೊಡಿ ಅಂತ ಕೇಳಿದ್ದೇನೆ. ಕಾರ್ತಿಕ್ ‌ನನ್ನ ಮನೆಗೆ ಯಾವಾಗ ಬಂದ? ನನ್ನ ಮನೆಯಲ್ಲಿ ‌ಕುಳಿತು‌ ಮಾತನಾಡಿರುವ ವಿಡಿಯೋ ಸಿಬಿಐಗೆ ಕೊಡ್ತಾ ಇದ್ದೇನೆ ಎಂದು ವಕೀಲ ದೇವರಾಜೇಗೌಡ ವಿಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶನ ‌ಮಾಡಿದರು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!