ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅವು ಅಸಲಿ ಎಂದು ಎಫ್‌ಎಸ್‌ಎಲ್ ವರದಿ ಬಂದಿದೆ.
ಅಶ್ಲೀಲ ವಿಡಿಯೋಗಳು ನಕಲಿಯಲ್ಲ, ಅವುಗಳನ್ನು ಮಾರ್ಫ್ ಮಾಡಿಲ್ಲ, ಅನಿಮೇಷನ್, ಗ್ರಾಫಿಕ್ಸ್, ಎಡಿಟ್ ಮಾಡಿಲ್ಲ ಅವುಗಳು ಅಸಲಿ ವಿಡಿಯೋ ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢಪಟ್ಟಿದೆ.ಈ ಮೂಲಕ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅವುಗಳು ನಕಲಿ, ಎಡಿಟ್ ಮಾಡಿದ ವಿಡಿಯೋ ಎಂದು ಹೇಳಲಾಗಿತ್ತು. ನಂತರ ಸತ್ಯಾಸತ್ಯತೆ ತಿಳಿಯಲು ಎಫ್‌ಎಸ್‌ಎಲ್ ಗೆ ಕಳುಹಿಸಿದ್ದು, ವಿಡಿಯೋ ಅಸಲಿ ಎಂದು ಸಾಬೀತಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ದಾಖಲಾದ ಸಂದರ್ಭದಲ್ಲಿ ತನಿಖಾಧಿಕಾರಿಗಳು ಅಶ್ಲೀಲ ವಿಡಿಯೋಗಳನ್ನು ಜಪ್ತಿ ಮಾಡಿ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ವಿಡಿಯೋಗಳು ನೈಜವಾಗಿವೆ. ಯಾವುದೇ ರೀತಿಯ ತಿರುಚುವಿಕೆ ನಡೆದಿಲ್ಲ ಎಂದು ವರದಿ ನೀಡಲಾಗಿದೆ.
ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎಂಬುದನ್ನು ತನಿಖೆಯಿಂದ ಪತ್ತೆ ಮಾಡಬೇಕಿದೆ. ಅಶ್ಲೀಲ ವಿಡಿಯೋಗಳಲ್ಲಿ ಪುರುಷನ ಮುಖ ಪ್ರದರ್ಶಿಸಿಲ್ಲ. ಹೀಗಾಗಿ ವಿಡಿಯೋದಲ್ಲಿನ ವ್ಯಕ್ತಿಗೂ, ಬಂಧಿತ ಆರೋಪಿಕ್ಕೂ ಹೋಲಿಕೆ ಮಾಡಿ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.