ಬೆಂಗಳೂರು : ನಟ ಪ್ರಕಾಶ್ ರಾಜ್ ಈತ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಆಪರೇಷನ್ ಸಿಂಧೂರ್ ಬಗ್ಗೆ ತಮ್ಮ ಟ್ವೀಟ್ ಖಾತೆಯ ಮೂಲಕ ವ್ಯಂಗ್ಯಾತ್ಮಕ ಹೇಳಿಕೆ ನೀಡಿರುವ ಪ್ರಕಾಶ್ ರಾಜ್ ,ಜೇನುಗೂಡಿಗೆ ಕಲ್ಲೆಸೆದಿದ್ದಾರೆ.
ಕಲಾವಿದ ಸತೀಶ್ ಆಚಾರ್ಯ ವ್ಯಂಗ್ಯಚಿತ್ರವೊಂದನ್ನು ರಚಿಸಿದ್ದು, ಅದರಲ್ಲಿ ಆಪರೇಷನ್ ಸಿಂಧೂರ್ ಅನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬಂತೆ ಬಿಂಬಿಸಲಾಗಿತ್ತು.
ಹರ್ ಘರ್ ಸಿಂಧೂರ್ ಎಂದು ಈ ಚಿತ್ರಕ್ಕೆ ಶೀರ್ಷಿಕೆ ನೀಡುವ ಮೂಲಕ ಹರ್ ಘರ್ ಮೋದಿ ಎಂಬ ಹಳೆಯ ಘೋಷಣೆಯನ್ನು ಲೇವಡಿ ಮಾಡಲಾಗಿತ್ತು.
ಈ ಚಿತ್ರವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್, ಮುದುಕನಿಂದ ಯಾವ ಮಹಿಳೆ ತಾನೇ ಸಿಂಧೂರ ಸ್ವೀಕರಿಸುತ್ತಾಳೆ ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ.ಈ ಹೇಳಿಕೆಗೆ ಈಗಾಗಲೇ ನೆಟ್ಟಿಗರಿಂದ ಪ್ರತಿಕ್ರಿಯೆ ಪ್ರಾರಂಭವಾಗಿದೆ.