ದೂರದರ್ಶನ (2023) ಚಿತ್ರದ ನಿರ್ದೇಶಕರಾದ ಸುಕೇಶ್ ಶೆಟ್ಟಿ ಅವರು ತಮ್ಮ ಮುಂದಿನ ಸಿನಿಮಾ ಪೀಟರ್ ಗಾಗಿ ಕೆಲಸ ಮಾಡುತ್ತಿದ್ದಾರೆ, ಸದ್ಯ ಸಿನಿಮಾ ಪೋಸ್ಟ್–ಪ್ರೊಡಕ್ಷನ್ನ ಅಂತಿಮ ಹಂತದಲ್ಲಿದೆ.
ರಾಜೇಶ್ ಧ್ರುವ, ರವಿಕ್ಷಾ, ಜಾನ್ವಿ ರಾಯಲ ಮತ್ತು ಮತ್ತಿತರರು ನಟಿಸಿರುವ ಈ ಚಿತ್ರವು ಮಡಿಕೇರಿ ಮತ್ತು ಭಾಗಮಂಡಲದ ಭೂದೃಶ್ಯಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ ಎಂದು ಹೇಳಲಾಗುತ್ತಿದೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜಿಸಿದ್ದಾರೆ. ಆವೇಶಂ ಚಿತ್ರದ ಹಿಟ್ ಹಾಡು ‘ಅರ್ಮಧಂ‘ ಹಾಡಿರುವ ಮಲಯಾಳಂನ ಜನಪ್ರಿಯ ಗಾಯಕ ಪ್ರಣವಂ ಸಸಿಯನ್ನು ಕರೆತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ ,
ಪ್ರಣವಂ ಸಸಿ ಪುಷ್ಪ 2 ರ ಮಲಯಾಳಂ ಆವೃತ್ತಿಯ ‘ಪೀಲಿಂಗ್ಸ್‘ ಹಾಡಿಗೆ ಹೆಸರುವಾಸಿಯಾಗಿದ್ದಾರೆ. ಪೀಟರ್ ಕನ್ನಡದಲ್ಲಿ ಚೊಚ್ಚಲ ಬಾರಿಗೆ ಹಾಡುತ್ತಿದ್ದಾರೆ. ರವಿ ಹಿರೇಮಠ್ ಮತ್ತು ರಾಕೇಶ್ ಹೆಗ್ಗಡೆ ನಿರ್ಮಾಪಕರಾಗಿದ್ದು, ಮುಂಗಾರು ವೇಳೆ ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಪೀಟರ್ ಪಾತ್ರದಲ್ಲಿ ರಾಮ್, ಪ್ರತಿಮಾ ನಾಯಕ್, ವರುಣ್ ಪಟೇಲ್ ಮತ್ತು ಭರತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಗುರುಪ್ರಸಾದ್ ನಾರ್ನಾಡ್ ಅವರ ಛಾಯಾಗ್ರಹಣ ಮತ್ತು ನವೀನ್ ಶೆಟ್ಟಿ ಸಂಕಲನವಿದೆ.




