Ad imageAd image

ಲಕ್ಷ್ಮಣ ಸವದಿ ಹುಟ್ಟು ಹಬ್ಬ ನಿಮಿತ್ಯ ರಾಷ್ಟ್ರಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ ಗೆದ್ದ ಪ್ರಣಯ ಪೂಜಾರಿ ತಂಡ

Bharath Vaibhav
ಲಕ್ಷ್ಮಣ ಸವದಿ ಹುಟ್ಟು ಹಬ್ಬ ನಿಮಿತ್ಯ ರಾಷ್ಟ್ರಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ ಗೆದ್ದ ಪ್ರಣಯ ಪೂಜಾರಿ  ತಂಡ
WhatsApp Group Join Now
Telegram Group Join Now

ಐನಾಪುರ  :  ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿಯವರ ೬೬ನೇ ಹುಟ್ಟುಹಬ್ಬದ ಪ್ರಯುಕ್ತ ಐನಾಪೂರದಲ್ಲಿ ರಾಷ್ಟ್ರಮಟ್ಟದ ಎ ಗ್ರೇಡ ಕಬಡ್ಡಿ ಪಂದ್ಯಾವಳಿಗಳನ್ನು ಏರ್ಪಡಿಸಿ ಅತ್ಯಂತ ಅಚ್ಚುಕಟ್ಟಾಗಿ ನೇರವೇರಿಸಿ ಯಶಸ್ಸಿಗೊಳಿಸಿದ್ದು, ಇದು ನಮ್ಮ ತಂದೆಯವರ ಮೇಲೆ ಹಾಗೂ ನಮ್ಮ ಕುಟುಂಬದ ಮೇಲೆ ಐನಾಪೂರ ಹಾಗೂ ಕಾಗವಾಡ ಕ್ಷೇತ್ರದ ಜನ ಇಟ್ಟಿರುವ ನಂಬಿಕೆ, ವಿಶ್ವಾಸ, ಪ್ರೀತಿಗೆ ನಾನು ಸದಾ ಚಿರಋಣಿಯಾಗಿದ್ದೇನೆ ಎಂದು ಯುವ ಮುಖಂಡ ಚಿದಾನಂದ ಲಕ್ಷ್ಮಣ ಸವದಿ ಹೇಳಿದರು.

ಅವರು ಐನಾಪೂರ ಪಟ್ಟಣದದಲ್ಲಿ ಏರ್ಪಡಿಸಿದ ರಾಷ್ಟ್ರಮಟ್ಟದ ಎ ಗ್ರೇಡ ಕಬಡ್ಡಿ ಪೈನಲ್ ಪಂದ್ಯಾವಳಿ ಮುಂಚೆ ರಾಷ್ಟ್ರಗೀತೆ ಸಲ್ಲಿಸಿ ತಂದೆ ಲಕ್ಷ್ಮಣ ಸವದಿಯವರ ೬೬ನೇ ಹುಟ್ಟುಹಬ್ಬದ ಪ್ರಯುಕ್ತ ಕೇಕ ಕತ್ತರಿಸಿ ಮಾತನಾಡುತ್ತಾ ನಮ್ಮ ತಂದೆಯವರು ಅಥಣಿ ಹಾಗೂ ಮತಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ಹಗಲಿರಳು ಶ್ರಮಿಸುತ್ತಿದ್ದಾರೆ.

ರೈತರ ಹಾಗೂ ಈ ಭಾಗದ ಜನರ ನಾಡಿಮೀಡಿತ ಇವರಾಗಿದ್ದು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡವ ಪಣ ತೊಟ್ಟಿರುವ ಇವರಿಗೆ ಈ ೨ಕ್ಷೇತ್ರದ ಅಪಾರ ಸಂಖ್ಯೆಯಲ್ಲಿ ಬೆಂಬಲಕ್ಕೆ ನಿಂತಿರುವದಕ್ಕೆ ಇಂತ ಕಾರ್ಯಕ್ರಮಗಳೇ ಸಾಕ್ಷಿಯಾಗಿದೆ.
ಈ ಭಾಗದ ಜನರ ಅಪೇಕ್ಷೇಯಂತೆ ಮುಂದಿನ ವರ್ಷ ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಅಖಿಲ ಭಾರತ ಎ ಗ್ರೇಡ ಕಬಡ್ಡಿ ಪಂದ್ಯಾವಳಿಗಳನ್ನು ಐನಾಪೂರದಲ್ಲಯೇ ಏರ್ಪಡಿಸಲಾಗುವುದು ಎಂದರು. ಕ್ಷೇತ್ರದ ಜನರ ಪವಿತ್ರ ಪಾದಾಗಳಿಗೆ ನಾನು ನತಮಸ್ತಕನಾಗಿದ್ದೇನೆ ಎಂದರು.

ಬಹಳ ರೋಚಕತೆಯಿಂದ ಕೂಡಿದ ಅಂತಿಮ ಪೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಬಾರಮತಿಯ ಅನಿಕೇತ ಪಾಟೀಲ ತಂಡವನ್ನು ಅಂತರದಿಂದ ಬೆಳಗಾವಿಯ ಪ್ರಣಯ ಪೂಜಾರಿ ಸ್ಪೋಟ್ಸ ಕ್ಲಬ್‌ದವರು ಸೋಲಿಸಿ ಪ್ರಥಮ ಸ್ಥಾನ ಪಡೆದರು.
೨ನೇ ಸ್ಥಾನಕ್ಕೆ ಪಾಟೀಲ ಬಾರಮತಿಯ ಅನಿಕೇತ ತಂಡ ತೃಪ್ತಿ ಪಡೆಯಿತು. ೩ನೇ ಸ್ಥಾನವನ್ನು ಬಾರಮತಿ ಅಕಾಡಾಮಿಯ ತಂಡ ಹಾಗೂ ಬೆಂಗಳೂರಿನ ರೈಜಿಂಗ ಬುಲ್ಸ ತಂಡ ಸಮನಾಗಿ ಹಂಚಿಕೊಡರು.

ಬೆಸ್ಟ ಆಲರೌಂಡರಾಗಿ ಬೆಳಗಾವಿಯ ಪ್ರಣಯ ಪೂಜಾರಿ ಸ್ಪೋಟ್ಸ ತಂಡದ ಗಣೇಶ ಪಡೆದಿಕೊಂಡರೆ, ಬೆಸ್ಟ್ ರೈಡರ ಬಾರಮತಿ ಅಕಾಡೆಮಿಯ ತಂಡದ ವಿರೇಂದ್ರ ಹಾಗೂ ಉತ್ತಮ ಕ್ಯಾಚರ (ಹಿಡಿತಗಾರ) ಬೆಂಗಳೂರಿನ ರೈಜಿಂಗ ಬುಲ್ಸ ತಂಡದ ರಜತ್ ಪಡೆದಿಕೊಂಡರು. ಈ ಸಂದರ್ಭದಲ್ಲಿ ಶಿವಕುಮಾರ ಸವದಿ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜು ಕುಚಜೂರೆ,ಸಂಜು ಭಿರಡಿ, ದಾದಾ ಜಂತೆನ್ನವರ, ಸುಭಾಷ ಪಾಟೀಲ, ಚಮನರಾವ ಪಾಟೀಲ,. ರಾಜೇಂದ್ರ ಪೋತದಾರ, ಶಿವು ಗುಡ್ಡಾಪೂರ,. ರಮೇಶ ಚೌಗಲಾ, ವಿನಾಯಕ ಚೌಗಲಾ, ನವೀನ ಗಾಣಿಗೇರ, ಗುಂಡು ಖವಟಕೊಪ್ಪ. ಸತೀಶ ಅಪರಾಜ, ಪುನ್ನಪ್ಪಾ ಲೋಂಡೆ, ಹಣಮಂತ ಗುರವ, ಪ್ರಕಾಶ ಗಾಣಿಗೇರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸವದಿ ಕುಟುಂಬದ ಅಭಿಮಾನಿಗಳು ಚಿದಾನಂದ ಸವದಿ ಹಾಗೂ ಶಿವಕುಮಾರ ಸವದಿ ಅವರನ್ನು ಹೆಗಲ ಮೇಲೆ ಹೊತ್ತು ಮೈದಾನದಲ್ಲಿ ಮೆರವಣಿಗೆ ಮಾಡಿದರು.

ಕಬಡ್ಡಿ ಅಮೋಚೂರ ಸಂಸ್ಥೆಯ ಶಿವಣ್ಣ ಎಮ್.ಕೆ. ಶಿರಗುಪ್ಪಿ, ಅಪ್ಪು ಪೂಜಾರಿ, ಸುರೇಶ ವಾಘಮೋಡೆ, ಕಬಡ್ಡಿ ಪಂದ್ಯಾಟಗಳ ನೇತೃತ್ವವನ್ನು ವಹಿಸಿ ಯಶಸ್ಸಿಗೊಳಿಸಿದರು.

ವರದಿ: ಮುರಗೇಶ ಗಸ್ತಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!