———————————–ಬಿ.ಕೆ. ಮಾಡೆಲ್ ಹೈಸ್ಕೂಲ್ ಶತಮಾನೋತ್ಸವ
ಬೆಳಗಾವಿ: ನಗರದ ಬಿ.ಕೆ. ಮಾಡೆಲ್ ಹೈಸ್ಕೂಲ್ ಶತಮಾನೋತ್ಸವ ಕರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕರ್ಯಕ್ರಮಗಳು ಜರುಗಿದವು.
ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಹಾಸ್ಯ ಭಾಷಣಕಾರ ಬಸವರಾಜ ಮಹಾಮನಿ, ಲೇಖಕ ಗುಂಡೇನಟ್ಟಿ ಮಧುಕರ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಅವಿನಾಶ ಪೋತದಾರ ಅಧ್ಯಕ್ಷತೆ ವಹಿಸಿದ್ದರು. ಕರ್ಯರ್ಶಿ ಶ್ರೀನಿವಾಸ ಸಿವಣಗಿ ಸಂಸ್ಥೆಯು ನಡೆದು ಬಂದ ದಾರಿಯನ್ನು ವಿವರಿಸಿದರು. ಅರವಿಂದ ಹುನಗುಂದ ಕರ್ಯಕ್ರಮ ನಿರೂಪಿಸಿದರು. ಸುಧೀರ ಕುಲರ್ಣಿ ವಂದಿಸಿದರು.




