———–ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಉನ್ನತ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ
ಹುಬ್ಬಳ್ಳಿ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಸೇನಾ ಕರ್ನಾಟಕ ಇವರಿಂದ ಮಹಾತ್ಮ ಗಾಂಧಿ ಹಾಗೂ ಕನಕದಾಸ ಜಯಂತಿ ಉತ್ಸವ ಪ್ರಯುಕ್ತವಾಗಿ 202425ರ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣವಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭ ಇಂದು 12.30 ಘಂಟೆಗೆ ಮರಾಠ ಭವನ ವಿದ್ಯಾನಗರದಲ್ಲಿ ನೆರವೇರಿತು.

ಸಾನಿಧ್ಯವನ್ನು ಬಸವಣ್ಣನವರು ಕಲ್ಯಾಣಪುರ ಮಠ ಸುಕ್ಷೇತ್ರ ಕುಂದಗೋಳ ಗೌರವಾನ್ವಿತ ಅಧ್ಯಕ್ಷತೆ. ಶ್ರೀಯುತ ಕೆ.ಏನ್ ಗಡ್ಡಿ (ಮಾಜಿ ಸಚಿವರು )ನವಲಗುಂದ ವಿಧಾನಸಭಾ ಕ್ಷೇತ್ರ.
ಅಧ್ಯಕ್ಷತೆ ಬೀರಪ್ಪ ಖಂಡೇಕರ (ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ) ಹಾಗೂ ಇತರ ಗಣ್ಯರು , ಮಾಜಿ ಸೈನಿಕರು ಭಾಗವಹಿಸಿದ್ದರು. ಪರಶುರಾಮ್ ದಿವಾನರು(ಮಾಜಿ ಸೈನಿಕರು )ಗೆಳೆಯರ ಬಳಗ ಧಾರವಾಡ ಜಿಲ್ಲಾ ಇವರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿತು ಜಿಲ್ಲೆಯ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ನಮ್ಮ ಹುಬ್ಬಳ್ಳಿ ವರದಿಗಾರ ಗುರುರಾಜ ಹಂಚಾಟೆ ಜೊತೆ ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ವರದಿ: ಗುರುರಾಜ ಹಂಚಾಟೆ




