ಸಿರುಗುಪ್ಪ :- ನಗರದ ಶ್ರೀ ಶ್ರೀನಿವಾಸ ಆಂಜನೇಯ್ಯ ಶನೇಶ್ವರ ದೇವಸ್ಥಾನದಲ್ಲಿ ಪ್ರಪಂಚ ಆರ್ಯವೈಶ್ಯ ಮಹಾಸಭಾ ಕರ್ನಾಟಕ ವಿಭಾಗ ಹಾಗೂ ತಾಲೂಕು ಘಟಕದಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತಾಲೂಕು ವಾಮ್ ಅಧ್ಯಕ್ಷ ಬಾದ್ಮಿ ಜಯರಾಮಶೆಟ್ಟಿ ಉದ್ಘಾಟಿಸಿದರು.
ಆರ್ಯವೈಶ್ಯ ಪಾದಯಾತ್ರೆ ಸಮಿತಿ ಅಧ್ಯಕ್ಷ ಹೆಚ್.ಜೆ.ಹನುಮಂತಯ್ಯ, ಮಾತನಾಡಿ ಹಣದ ಕೊರತೆಯಿಂದಾಗಿ ವಿದ್ಯಾಭ್ಯಾಸದಿಂದ ದೂರ ಉಳಿಯಬಾರದೆಂದು ನಮ್ಮ ಮಹಾಸಭಾದಿಂದ ಬಡ್ಡಿರಹಿತ ಸಾಲವ ಸೌಲಭ್ಯವಿದ್ದು, ಬಡ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದರು.
ಸಿ.ಎನ್.ಎನ್. ಶಾಲೆಯ ಅಧ್ಯಕ್ಷ ಚಾಗಿ ಸುಬ್ಬಯ್ಯಶೆಟ್ಟಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಸಾಧನೆಯ ಹಿಂದೆ ನಿಮ್ಮ ಪೋಷಕರ ಪರಿಶ್ರಮವಿರುತ್ತದೆ. ಆದಕಾರಣ ಮುಂದೆ ತಂದೆತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು.ವಿದ್ಯಾಭ್ಯಾಸಕ್ಕೆಂದು ಸರ್ಕಾರದಿಂದಲೂ ಹಲವು ಯೋಜನೆಗಳಿವೆ. ಅದರೊಂದಿಗೆ ನಮ್ಮ ಮಹಾಸಭಾದ ಯೋಜನೆಗಳನ್ನು ಪಡೆಯಬಹುದೆಂದರು.
ವಾಮ್‌ನ ಕರ್ನಾಟಕ ವಿಭಾಗದ ಸಂಘಟನಾ ಕಾರ್ಯದರ್ಶಿ ಕೆ.ರಾಘವೇಂದ್ರ ಅಮಿತ್ ಮಾತನಾಡಿ ಪ್ರಪಂಚ ಆರ್ಯವೈಶ್ಯ ಮಹಾಸಭಾ(ವಾಮ್) ಅಧ್ಯಕ್ಷ ರಾಮಕೃಷ್ಣ ತಂಗುತುರಿ, ಉಪಾಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಎಲ್.ದಿಲೀಪ್ ಅವರ ಮಾರ್ಗದರ್ಶನದ ಮೇರೆಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆಂದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಸಿ.ಎ, ಮೆಡಿಕಲ್ ಪಾರ್ಮುಸಿ, ಬಿಎಎಮ್‌ಎಸ್, ಬಿಕಾಂ, ಬಿಸಿಎ, ಬಿ.ಇ, ಬಿ.ಎಸ್.ಇ ಅಗ್ರಿ ಇನ್ನಿತರ ಕೋರ್ಸ್ ಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಇದೇ ವೇಳೆ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಯು.ಸಿ.ರಾಮಾಂಜಿನೇಯ್ಯ, ಶ್ರೀ ಶ್ರೀನಿವಾಸ ಆಂಜನೇಯಸ್ವಾಮಿ ಶನೇಶ್ವರ ಟ್ರಸ್ಟಿನ ಅಧ್ಯಕ್ಷ ಅಮರಾವತಿ ಸುನೀಲ್ ದತ್ತ, ವಿಶ್ವಜ್ಯೋತಿ ಮಾಂಟೇಸ್ಸರಿ ಶಾಲೆಯ ಮುಖ್ಯಶಿಕ್ಷಕಿ ಡಿ.ಆರ್.ರಾಜೇಶ್ವರಿ, ಯಶಸ್ವಿನಿ ಮಹಿಳಾ ಮಂಡಳಿ ಅಧ್ಯಕ್ಷೆ ಬಿ.ಇ.ರಾಧಾ, ಎಸ್.ಇ.ಎಸ್. ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ಇ.ಅವಿನಾಶ್, ಕಿಡ್ಸ್ ಪ್ಯಾರಾಡೈಸ್ ಸ್ಕೂಲ್ ಅಧ್ಯಕ್ಷೆ ಬಿ.ಇ.ಗೋದಾವರಿ, ಗಾಯತ್ರಿ ವಿದ್ಯಾ ಮಂದಿರ ಶಾಲೆಯ ಅಧ್ಯಕ್ಷೆ ನಸ್ರೀನಾ ಸುಲ್ತಾನ್, ಇನ್ನಿತರ ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಇದ್ದರು.
ವರದಿ:- ಶ್ರೀನಿವಾಸ ನಾಯ್ಕ