ಮಕ್ಕಳ ಸೂಕ್ತ ಪ್ರತಿಭೆಯನ್ನು ಹೊರಚಿಮ್ಮಿಸಲು ಪ್ರತಿಭಾ ಕಾರಂಜಿಯು ಸೂಕ್ತ ವೇದಿಕೆಯಾಗಿದೆ”

Bharath Vaibhav
ಮಕ್ಕಳ ಸೂಕ್ತ ಪ್ರತಿಭೆಯನ್ನು ಹೊರಚಿಮ್ಮಿಸಲು ಪ್ರತಿಭಾ ಕಾರಂಜಿಯು ಸೂಕ್ತ ವೇದಿಕೆಯಾಗಿದೆ”
WhatsApp Group Join Now
Telegram Group Join Now

ವಿಜಯಪುರ :-ಮಕ್ಕಳಲ್ಲಿ ಅವ್ಯಕ್ತವಾಗಿರುವ ಸೂಕ್ತ ಪ್ರತಿಭೆಯನ್ನು ಕಾರಂಜಿ ರೂಪದಲ್ಲಿ ಹೊರಚಿಮ್ಮಿಸಿ ಸಾಧನೆ ಮಾಡುವಂತೆ ಉತ್ತೇಜಿಸಲು ಪ್ರತಿಭಾ ಕಾರಂಜಿಯು ಸೂಕ್ತವಾದ
ವೇದಿಕೆಯಾಗಿದೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಧಾನ ಕಾರ್ಯದರ್ಶಿ ಬಸವರಾಜ ಸೋಮಪೂರ ಹೇಳಿದರು.

ವಿಜಯಪುರ ಜಿಲ್ಲಾ ಪಂಚಾಯತ ಮತ್ತು ಶಾಲಾ ಶಿಕ್ಷಣ ಇಲಾಖೆ ಹಾಗೂ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಕಾರ್ಯಲಯ ಸಮೂಹ ಸಂಪನ್ಮೂಲ ಕೇಂದ್ರ ಕನ್ನೊಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ವರ್ಧೆಗಳು ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಹಮ್ಮಿಕೊಂಡಿರುವ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನೊಳ್ಳಿ ವಲಯದ ಸಿ ಆರ್ ಪಿ ಭೀಮನಗೌಡ ಬಿರಾದಾರ ಮಾತನಾಡಿ
ಶಾಲೆಯಲ್ಲಿಯೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವು ಶಿಕ್ಷಕರು ದೊರೆಯುವಂತೆ ಮಾಡುವ ಮೂಲಕ ವಿದ್ಯಾರ್ಥಿಗಳು ಎಲ್ಲಾ ಸ್ಪರ್ಧೆಯನ್ನು ನೀಡಿ ಸಾಧನೆ ಮಾಡುತ್ತಿದ್ದಾರೆ.
ಮನಸ್ಸಿದ್ದಲ್ಲಿ ಮಾರ್ಗವಿದೆ ಆದ್ದರಿಂದ ಮಕ್ಕಳು ತಮ್ಮಲ್ಲಿನ ವಿಶೇಷ
ಸಾಮರ್ಥ್ಯವನ್ನು ಅನಾವರಣ ಮಾಡಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಇದೆ ಸಮಾರಂಭದಲ್ಲಿ ಸತತ 6 ವರ್ಷ ಕನ್ನೊಳ್ಳಿ ವಲಯದ ಸಿ ಆರ್ ಪಿಯಾಗಿ ಸೇವೆ ಸಲ್ಲಿಸಿರುವ ನಿಮಿತ್ಯವಾಗಿ ಭೀಮನಗೌಡ ಬಿರಾದಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಬಂದಾಳ ಗ್ರಾಮ ಪಂಚಾಯತ ಅಧ್ಯಕ್ಷ ಯಮನಪ್ಪ ಹೊಸಮನಿ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಶಾಲಾ ಮುಖ್ಯಗುರು ನಿಂಗನಗೌಡ ಪಾಟೀಲ ಸಭೆ ಅಧ್ಯಕ್ಷತೆವಹಿಸಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಸವರಾಜ ಶಾಹಾಪೂರ.ಕಾರ್ಯದರ್ಶಿ ಆರ್. ಎಂ.ಮುಜಾವರ.ಉಪಾಧ್ಯಕ್ಷರ ಪ್ರತಿನಿಧಿ ನಾನಾಗೌಡ ನಾಗಾವಿ.ಸದಸ್ಯರಾದ ಶ್ರೀಶೈಲ ಕುಂಬಾರ.ಬಸಣ್ಣ ಯಳಮೇಲಿ. ಅಶೋಕ ತಳವಾರ.ಗೊಲ್ಲಾಳಪ್ಪಗೌಡ ಬಿರಾದಾರ.ಸುಂಗಠಾಣದ ಸಿ ಆರ್ ಪಿ ಆರ್.ಜಿ.ಭೂಸನೂರ. ಗುಬ್ಬೇವಾಡದ ಸಿ ಆರ್ ಪಿ ಪ್ರಭುಗೌಡ ಜಿ ಏವೂರ. ಶಿಕ್ಷಕ .ಶಿಕ್ಷಕ ಸಾಹೇಬಗೌಡ ಆರ್ ಹರನಾಳ.ಸಿ ಆರ್ ಪಿ ಸಂಘದ ಅಧ್ಯಕ್ಷ ರಾಜುಕುಮಾರ ಭೂಸನೂರ.ಹಣಮಂತರಾಯ ಎಸ್. ನಾಗಣಸೂರ. ಬಿ.ಎಂ.ಕೋಟಿ.ಎಸ್.ಡಿ.ದೇಸಾಯಿ.ನವೀನಕುಮಾರ ಎಚ್.ಎಸ್.ಎಸ್.ಎಂ.ಬಾಗೇವಾಡಿ.ಉಮೇಶ ಬಡಿಗೇರ. ಹಿರಿಯ ಶಿಕ್ಷಕ ಬಿ.ಎಸ್.ದೇವರಮನಿ. ಶ್ರೀಪಾದ ದೀಕ್ಷಿತ .ಸುನಿತಾ ಅರಿ. ಈರಮ್ಮ ಮುತ್ತಿನಪೆಂಡಿಮಠ. ಸಿದ್ದಮ್ಮ ಕುಂಬಾರ. ಸವಿತಾ ಕೆಂಭಾವಿ.ಪ್ರೀತಿ ಸಗರ.ಕನ್ಯಾಕುಮಾರಿ ದುಳಖೇಡ. ಕುಮಾರಿ ಲಕ್ಷ್ಮೀ
ರೂಗಿ.ಮಹಾದೇವಿ ಭಾಗಿ.ಸುಮಾಂಗಲಾ ಕೆಂಭಾವಿ. ಸಿದ್ದಲಿಂಗಪ್ಪ ಪೋದ್ದಾರ.ಪಿ.ವ್ಹಿ.ಕುಲಕರ್ಣಿ. ಮಲ್ಲಮ್ಮ ಹಿಪ್ಪರಗಿ. ಈಶ್ವರಿ ನಾಗಠಾಣ.ಸಿದ್ದು ತಳವಾರ .ಗುರುರಾಜ ಛಾಯಗೋಳ. ಅರ್ಚನಾ ಬಿರಗೊಂಡ.ಬೋರಮ್ಮ ಬಿರಾದಾರ.ಸುಮಯ್ಯ ಬಿಜಾಪೂರ.
ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಗೂ
ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕ ಬಸವರಾಜ ಅಗಸರ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಬುಯ್ಯಾರ ನಿರೂಪಿಸಿದರು.ಶಿಕ್ಷಕ ಕೃಷ್ಠ್ಣರಾವ ಕುಲಕರ್ಣಿ ವಂದಿಸಿದರು.

ವರದಿ. ಸಾಯಬಣ್ಣ ಮಾದರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!