Ad imageAd image

ಮಕ್ಕಳ ಪ್ರತಿಭೆ ಅನಾವರಣದ ವೇದಿಕೆ ಪ್ರತಿಭಾ ಕಾರಂಜಿ: ಶಂಕರಲಿಂಗಪ್ಪ

Bharath Vaibhav
ಮಕ್ಕಳ ಪ್ರತಿಭೆ ಅನಾವರಣದ ವೇದಿಕೆ ಪ್ರತಿಭಾ ಕಾರಂಜಿ: ಶಂಕರಲಿಂಗಪ್ಪ
WhatsApp Group Join Now
Telegram Group Join Now

ಸೇಡಂ: ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಂಕರಲಿಂಗಪ್ಪ ಹೇಳಿದರು.

ಇಟಕಾಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉತ್ತಮ ಪ್ರತಿಭೆಯುಳ್ಳ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸೇಡಂ ತಾಲೂಕಿಗೆ ಒಳ್ಳೆಯ ಹೆಸರು ಬರುವಂತೆ ಶಿಕ್ಷಕರು ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ತಾಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅರವಿಂದ ಪಸಾರ ಕಾರ್ಯಕ್ರಮ ಉದ್ಘಾಟಿಸಿದರು.ಗ್ರಾಮ ಪಂಚಾಯತ್ ಅಧ್ಯಕ್ಷೆ ನರಸಿಂಗಮ್ಮ ಲಾಲಪ್ಪ ಪೊಟೇಲ್ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಾಯಪ್ಪ ಬೋಯಿನ್, ಸದಸ್ಯರಾದ ಇಸ್ರಾಯಿಲ್, ಲಾಲಪ್ಪ ಯಾದವ, ಹಿರಾಲಾಲ್, ಪ್ರೌಢ ಶಾಲಾ ಮುಖ್ಯಗುರುಗಳ ಅಧ್ಯಕ್ಷರಾದ ಅಶೋಕರೆಡ್ಡಿ ಚಿಲುಮೆ, ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಮಹ್ಮದ್ ರಫೀಕ್, ಮುಸ್ಲಿಂ ನೌಕರರ ಸಂಘದ ಅಧ್ಯಕ್ಷರಾದ ಜಾಫರ ಅಲಿ, ಮುಖ್ಯಗುರುಗಳಾದ ಮಸೀಯುದ್ದೀನ್, ಸತೀಶ ಢಗೆ, ಬಷಿರ ಅಹ್ಮದ್ ,ನೀಲಪ್ಪ ತಂಬಾಕೆ, ಸಿ,ಆರ್,ಪಿ ಅಶೋಕರೆಡ್ಡಿ ಉಲಿಗುಂಡಂ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಿಕ್ಷಕರಾದ ಝಾಕೀರ ಹುಸೇನ್, ನಾರಾಯರೆಡ್ಡಿ, ಮಹಾದೇವಪ್ಪ ಕಾರ್ಯಕ್ರಮ ನಿರ್ವಹಿಸಿದರು.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಜಾಫರ ಅಲಿ ಹಾಗೂ ಬಷಿರ ಅಹ್ಮದ್ ರವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವರದಿ :ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!