Ad imageAd image

ಬೆನಕನಾಳ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿ

Bharath Vaibhav
ಬೆನಕನಾಳ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿ
WhatsApp Group Join Now
Telegram Group Join Now

ಕುಷ್ಟಗಿ:-  ಬೆನಕನಾಳ ಗ್ರಾಮದ ಸರ್ಕಾರಿ ಹಿರಿಯ ಮಾದರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುದುವಾರರಂದು ನಡೆದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ,ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಸಮೋಹ ಸಂಪನ್ಮೂಲಗಳ ಕೇಂದ್ರ ಚಳಗೇರಾ ಇವರ ನೇತೃತ್ವದೊಂದಿಗೆ ಚಳಗೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

 

ಈ ಒಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕುಷ್ಟಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ಕುದುರಿ ವಿದ್ಯಾರ್ಥಿಗಳು ಗುಣಮಟ್ಟದ ಕಲಿಕೆಯ ಜೊತೆಗೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸೋವದಂತ ಕಾರ್ಯಕ್ರಮಗಳಲ್ಲಿ ಭಾಗವಸುತ್ತಿರುವುದು ಸಂಭ್ರಮ ದಿನಗಳ ಸಂಕೇತವಾಗಿದೆ ಎಂದು ಸಂತೋಷದ ಸಂಗತಿಗಳನ್ನು ಹಂಚಿಕೊಂಡರು.

ವಿದ್ಯಾರ್ಥಿಗಳ ಪ್ರತಿಭೆ ಎಂಬುದು ಮರೆಯಲಾರದ ಮಾಣಿಕ್ಯ ವಿದ್ದಂತೆ ಅದು ಯಾರ ಸ್ವತ್ತು ಅಲ್ಲ ಆಗಿನ ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಬಡತನದಲ್ಲಿ ಬೆಂದು ಉತ್ತಮ ವಿದ್ಯೆಯನ್ನು ಪಡೆದು ಒಬ್ಬ ವ್ಯಕ್ತಿ ಈ ದೇಶದ ಪ್ರಧಾನಿ ಆಗಿರೋದು ಇತಿಹಾಸವಿದೆ ಮಕ್ಕಳಲ್ಲಿ ಅಡಗಿರುವ ವಿವಿಧ ಪ್ರತಿಭೆಯನ್ನು ಗುರುತಿಸುವಂತ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕಿವಿಮಾತು ಹೇಳಿದರು.

ಹಾಗೂ ಸಿ ಆರ್ ಪಿ ಸಂಪನ್ಮೂಲ ವ್ಯಕ್ತಿಗಳಾದಂತ ಶೇಖರಪ್ಪ ಕುರಿ ಮಾತನಾಡಿ ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದು ಮತ್ತು ಬರಹದೊಂದಿಗೆ ಕ್ರೀಡಾ ಮನೋಭಾವನೆಗಳನ್ನು ಬಳಸಿಕೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮ ಬೇಕೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಮಲ್ಲಪ್ಪ ದಾರಿ ಮನೆ ಕಾರ್ಯಕ್ರಮದ ಈ ಒಂದು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹುಚ್ಚಪ್ಪ ಕೊಪ್ಪಳ ಉಪಾಧ್ಯಕ್ಷರಾದ ಮಲ್ಲಪ್ಪ ಬೆಂಗಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು .

ಗ್ರಾಮ ಪಂಚಾಯತಿ ಸದಸ್ಯರಾದ ಮುತ್ತಣ್ಣ ಇಳಿಗೆರ್ ಗಂಗಾಧರ ಚಡ್ಡಿಭಟ್ಲದ ಮಲ್ಲಪ್ಪ ಬಿಂಗಿಕೊಪ್ಪ ಮುತ್ತಣ್ಣ ರಾಜುೂರು ಹಾಗೂ ಕ್ಲಸ್ಟರ್ ಮಟ್ಟದ ವ್ಯಾಪ್ತಿಯಲ್ಲಿ ಬರುವ 17 ಶಾಲಾ ಮುಖ್ಯ ಶಿಕ್ಷಕರು ಸ ಶಿಕ್ಷಕರ ವೃಂದ ಬೆನಕನಾಳ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಗ್ರಾಮದ ಪ್ರಮುಖರಾದ ಮಲ್ಲಪ್ಪ ದಾರಿ ಮನಿ ಕಳಕಪ್ಪ ಕೋರಿ ಭೂಮೇಶ್ ಅಂಗಡಿ ವೀರಣ್ಣ ಬಿಂಗಿಕೊಪ್ಪ ನೀಲಪ್ಪ ಮೇಟಿ ಬಸವರಾಜ್ ಬಂಗಿ ಹನುಮಂತ ಮುಗಳಿ ಸಂಗಪ್ಪ ಕರಡಿ ಬಸವರಾಜ್ ವಡ್ದರ್ ಮಲ್ಲಪ್ಪ ನಂದಾಪುರ ರಾಮಣ್ಣ ಪೂಜಾರಿ ಮಾನಪ್ಪ ಬಡಿಗೇರ ಪಾಲ್ಗೊಂಡಿದ್ದರು ಬಸವರಾಜ್ ಪಡಚಿಂತಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರಾದ ಯಲ್ಲಪ್ಪ ಬಿತ್ತಲಿ ವಂದಿಸಿದರು ಇದೆ ಸಂದರ್ಭದಲ್ಲಿ ನಿವೃತ್ತಿ ಗೊಂಡ ಕಳಕನ ಗೌಡ ಮಾಲಿಪಾಟೀಲ ಚಂದ್ರಶೇಖರ ಜುಂಜುಲಕೊಪ್ಪ ಶಿಕ್ಷಕರನ್ನು ಸನ್ಮಾನಿಸಿ ಗೌರಿಸಲಾಯಿತು ವಿವಿಧ ಶಾಲೆಗಳಿಂದ ಆಗಮಿಸಿದ ಮುದ್ದು ವಿದ್ಯಾರ್ಥಿಗಳು ವಿವಿಧ ಬಗೆಯ ಸಂಸ್ಕೃತಿಕ ಚಿತ್ಯೋತ್ಸವದಂತ ಕಾರ್ಯಕ್ರಮ ನೀಡುವ ಮೂಲಕ ವೇದಿಕೆಗೆ ರಂಗು ತಂದರು ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು

 ವರದಿ:- ಮಲ್ಲಿಕಾರ್ಜುನ ದೋಟಿಹಾಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!