
ಅರಸೀಕೆರೆ: ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರು ಹಾಗೂ ಅರಸೀಕೆರೆ ಶಾಸಕರಾದ ಕೆ ಎಂ ಶಿವಲಿಂಗೇಗೌಡರು ಇಂದು ಅರಸೀಕೆರೆ ನಗರದ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನೊಳಂಬ ಲಿಂಗಾಯತ ಸಂಘ (ರಿ) ಬೆಂಗಳೂರು, ಉಪ ಸಮಿತಿ ಅರಸೀಕೆರೆ ಹಾಸನ ಜಿಲ್ಲೆ ಇವರ ವತಿಯಿಂದ ಆಯೋಜನೆ ಮಾಡಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀಮದ್ ರಂಭಾಪುರಿವೀರಸಿಂಹಾಸನಾಧೀಶ್ವರ 1008 ಜಗದ್ಗುರು ಶ್ರೀ ಜ್ಞಾನಪ್ರಭು ಸಿದ್ದರಾಮದೇಶಕೇಂದ್ರ ಮಹಾಸ್ವಾಮಿಜಿಯವರು ಯಳನಾಡು ಮಹಾಸಂಸ್ಥಾನ ಅರಸೀಕೆರೆ-ಕಡೂರು ಇವರ ಸಾನಿದ್ಯದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಗುರು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಕಾರ್ಯಕ್ರಮವನ್ನು ಹಾಗೂ ಸಮಾರಂಭದಲ್ಲಿ ನೆರೆದಿದ್ದ ಜನತೆಯನ್ನು ಉದ್ದೇಶಿಸಿ ಮಾತನಾಡಿ ಹಾಗೂ ಅರಸೀಕೆರೆ ನಗರ ವ್ಯಾಪ್ತಿಯಲ್ಲಿರುವ 29 ಗುಂಟೆ ಜಮೀನನ್ನು ಅರಸೀಕೆರೆ ನಗರಸಭೆ ವತಿಯಿಂದ ಸರ್ಕಾರದ ವತಿಯಿಂದ ನೊಳಂಬ ಲಿಂಗಾಯತ ಸಂಘದ ಸ್ವಾಧಿನಕ್ಕೆ ಕೊಡುವುದಾಗಿ ಭರವಸೆ ನೀಡಿದರು.
*ಈ ಸಂದರ್ಭದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹುಲ್ಲಹಳ್ಳಿ ಸುರೇಶ್ ರವರು, ಬಿಕೆ ಚಂದ್ರಶೇಖರ್ ರವರು ಅಧ್ಯಕ್ಷರು ನೊಳಂಬ ಲಿಂಗಾಯತ ಸಂಘ ಬೆಂಗಳೂರು, ಗಂಜಿಗೆರೆ ಚಂದ್ರಶೇಖರ್ ರವರು ಅಧ್ಯಕ್ಷರು ಉಪಸಮಿತಿ, ನೊಳಂಬ ಲಿಂಗಾಯತ ಸಮಿತಿ ಅರಸೀಕೆರೆ, ಪಂಡಿತ್ ವೀರಭದ್ರಪ್ಪ ತಗಡೂರು ನಿವೃತ್ತ ಉಪನ್ಯಾಸಕರು ಬೆಂಗಳೂರು, ಅಡವಿಸ್ವಾಮಿಯವರು, ಕಾಟಿಕೆರೆ ಉಮೇಶ್ ರವರು,ರಾಮಲಿಂಗಪ್ಪ, ಮಧುಸೂಧನ್, ನಟರಾಜ್, ಕುಬೇರಪ್ಪ, ಸಂಕೋಢನಹಳ್ಳಿ ಸಿದ್ದಪ್ಪ,ಧನಂಜಯ, ಶಶಿಧರ್, ಬೆಳಗುಂಬ ಬಾಬು,ರಾಜಶೇಖರ್, ಪಿ ಶಿವಕುಮಾರ್ ಸಮಾಜದ ಬಂಧುಗಳು ಸ್ಥಳೀಯ ಮುಖಂಡರು ಪ್ರತಿಭಾವಂತ ವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ರಾಜು




