ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದರ್ ತಾಲೂಕಿನ ಮನ್ನಳ್ಳಿ ಗ್ರಾಮದ ತಸ್ಲೀಮ ಬೇಗಂ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನೂತನ ವಾತ್ಸಲ್ಯ ಮನೆ ಕಟ್ಟಿದ್ದು , ಈ ನೂತನ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಬೀದರ್ ಜಿಲ್ಲೆಯ ಜಿಲ್ಲಾ ನಿರ್ದೇಶಕರು ಪ್ರವೀಣ್ ಕುಮಾರ್ ಹಸ್ತಾಂತರಿಸಿ ಮಾತನಾಡಿದರು.
ಸಮಾಜ ಬದಲಾವಣೆಯಾಗಬೇಕಾದರೆ ಬದುಕಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಮನೆಯೂ ಪ್ರಮುಖವಾಗಿದ್ದು ಜೀವನ ನಡೆಸಲು ಅತಿ ಮುಖ್ಯವಾದದ್ದು ಸೂರು, ಧರ್ಮಸ್ಥಳದ ಪರಮಪೂಜ್ಯರು ಬಡವರಿಗೆ ವಾತ್ಸಲ್ಯ ಮನೆವೆ ನಿರ್ಮಾಣ ಮಾಡಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನಕಲ್ಯಾಣ ಕಾರ್ಯ ಮಾಡುತ್ತಿದ್ದಾರೆ, ಈ ಮನೆಗೆ ವಾತ್ಸಲ್ಯ ಮನೆ ಯೆಂದು ನಾಮಕರಣ ಮಾಡಿ ನಿರ್ಮಿಸಿಕೊಟ್ಟು ಬಡವರ ಬಾಳಲ್ಲಿ ಬೆಳಕಾಗಿದೆ ಈ ಮಹತ್ ಕಾರ್ಯಗಳನ್ನು ರಾಜ್ಯ ವ್ಯಾಪ್ತಿಯಲ್ಲಿ ಮಾಡುತ್ತಿದ್ದೇವೆ, ಬೀದರ ಜಿಲ್ಲಾ ವ್ಯಾಪ್ತಿಯಲ್ಲಿ 26 ಮನೆಗಳನ್ನು ಹಾಗೂ ಮನೆಗಳನ್ನು ನಿರ್ಮಾಣ ಮಾಡಿ ನಿರ್ಗತಿಕ ತಾಯಂದಿರಿಗೆ ಮಾನ್ಯರ ಹಸ್ತದಿಂದ ಹಸ್ತಾಂತರ ಮಾಡಿದವು ಎಂದು ಮಾಹಿತಿ ನೀಡಿದರು.
ಗ್ರಾಂ ಪಂ ಸದಸ್ಯರು ಶಂಕರ್ ಬಾಬು ರವರು ಈ ಕಾರ್ಯಕ್ರಮ ಉದ್ದೇಶಿಸಿ ಗ್ರಾಮದ ಮಹಿಳೆಯರ ಸಬಲೀಕರಣಕ್ಕೆ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಯಾ ಪಾತ್ರ ಬಹುದೊಡ್ಡದಾಗಿದೆ ಗ್ರಾಮದ ಹೆಣ್ಣು ಮಕ್ಕಳಿಗೆ ಯಾವುದೇ ಅಡಮಾನಗಳಿಲ್ಲದೆ ಒಂದು ಲಕ್ಷ ರೂಪಾಯಿ ವರೆಗೂ ಸಾಲ ಸಿಕ್ಕುತ್ತಿದ್ದು ಕುಟುಂಬ ಅಭಿವೃದ್ಧಿಗಾಗಿ ಗ್ರಾಮಸ್ಥರ ಸ್ವಾವಲಂಬನೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ, ಬಹುದೊಡ್ಡ ಸಹಕಾರಿಯಾಗಿದೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿದ್ದು ಕೂಡ ರಾಜ್ಯದ ಗಡಿಭಾಗದಲ್ಲಿರುವ ನಮ್ಮ ಗ್ರಾಮಕ್ಕೂ ಕೂಡ ಅಭಿವೃದ್ಧಿಯ ಆಶಾಭಾವನೆ ನಮ್ಮಲ್ಲಿಗೆ ತಲುಪಿದ್ದು ಅವರ ಸರ್ವಾಂಗೀಣ ಅಭಿವೃದ್ದಿಯ ಹಲವು ಕೈಂಕರ್ಯಗಳು ನಾಡಿನ ಕಲ್ಯಾಣಕ್ಕೇ ಸಾಕ್ಷಿಯಾಗಿವೆ ಇಳಿ ವಯಸಿನಲ್ಲಿ ಕುಟುಂಬಕ್ಕೆ ನೆಮ್ಮದಿಯಾಗಬೇಕಾದ ಸೂರನ್ನು ನಿರ್ಮಿಸುವುದು ಅತ್ಯಗತ್ಯವಾಗಿದ್ದು ಯೋಜನೆಯಿಂದ ನೆರವು ಪಡೆದುಕೊಂಡ ಫಲಾನುಭವಿ ನಿಜಕ್ಕೂ ಧನ್ಯಳು ಎಂದು ನುಡಿದರು.
ಈ ವೇಳೆ ತಾಲೂಕಿನ ಯೋಜನಾಧಿಕಾರಿಗಳು ಸಂಜಯ್ ನಾಯಕ್, ಗ್ರಾ ಪಂ ಅಧ್ಯಕ್ಷರು ಶೀನತಿ ಕಾಶಮ್ಮ ಗಂಡ ಭಕ್ಕಪ್ಪ, ಗ್ರಾ ಪಂ ಮಾಜಿ ಅಧ್ಯಕ್ಷರು ಸಮ್ಮದ್ , ಗ್ರಾ ಪಂ ಸದಸ್ಯರು ಪೃಥ್ವಿರಾಜ್, ಗ್ರಾ ಪಂ ಮಾಜಿ ಅಧ್ಯಕ್ಷರು ಅಲ್ಲಾಹುದ್ದೀನ್, ಊಟ ಅಧ್ಯಕ್ಷರಾದ ಶ್ರೀಮತಿ ವೈಶಾಲಿ, ಉಪಾಧ್ಯಕ್ಷರು ಶ್ರೀಮತಿ ನಿರ್ಮಲ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಜಯಸುಧ , ವಲಯ ಮೇಲ್ವಿಚಾರಕರು ಉಮೇಶ್ ಸೇವಾ ಪ್ರತಿನಿಧಿಯವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು
ವರದಿ: ಸಂತೋಷ ಬಿಜಿ ಪಾಟೀಲ್