Ad imageAd image

ದೋಣಿ ನಾವಿಕರ ಬದುಕು ಬದಲಿಸಿದ ಪ್ರಯಾಗರಾಜ್ ಕುಂಭಮೇಳ

Bharath Vaibhav
ದೋಣಿ ನಾವಿಕರ ಬದುಕು ಬದಲಿಸಿದ ಪ್ರಯಾಗರಾಜ್ ಕುಂಭಮೇಳ
WhatsApp Group Join Now
Telegram Group Join Now

ಲಕ್ನೋ: 45 ದಿನಗಳ ಕಾಲ ನಡೆದ ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಉತ್ತರ ಪ್ರದೇಶದ ಆರ್ಥಿಕತೆಗೆ ದೊಡ್ಡ ಉತ್ತೇಜನ​ ನೀಡಿದೆ. ಕೇವಲ ಸರ್ಕಾರದ ಖಜಾನೆ ಮಾತ್ರವಲ್ಲ.. ಅದೆಷ್ಟೋ ಕುಟುಂಬಗಳ ಬದುಕಿನ ದಿಕ್ಕನ್ನೇ ಬದಲಿದೆ.

ಪ್ರಯಾಗ್​ರಾಜ್​ನ ನಾವಿಕ ಕುಟುಂಬವೊಂದು 45 ಗಳ ಕಾಲ ಸುಮಾರು 130 ದೋಣಿಗಳ ಮೂಲಕ 30 ಕೋಟಿ ರೂ. ಆದಾಯ ಬಂದಿದೆ. ಪ್ರತಿನಿತ್ಯ ದೋಣಿಯಿಂದ 50,000-52,000 ರೂಪಾಯಿ ಆದಾಯ ಗಳಿಸಿದೆ. ಈ ದೋಣಿಯು 45 ದಿನದಲ್ಲಿ 23 ಲಕ್ಷ ರೂಪಾಯಿಯಷ್ಟು ಗಳಿಕೆ ಮಾಡಿದೆ. ಅಂದ್ರೆ ಪ್ರತಿನಿತ್ಯ ಒಂದು ದೋಣಿಯಿಂದ 50,000-52,000 ರೂಪಾಯಿ ಆದಾಯ ಬಂದಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಪ್ರಯಾಗ್‌ರಾಜ್‌ನ ಅರೈಲ್ ಪ್ರದೇಶದ ದೋಣಿ ಚಾಲಕ ಪಿಂಟು ಮಹಾರ, ಮಹಾಕುಂಭದ ಸಮಯದಲ್ಲಿ ವಿವಿಐಪಿಗಳನ್ನು ಮತ್ತು ಸಾಮಾನ್ಯ ಭಕ್ತರನ್ನು ಸ್ನಾನದ ಘಾಟ್‌ಗಳಿಗೆ ಕರೆದೊಯ್ಯುವ ಮೂಲಕ 30 ಕೋಟಿ ರೂ.ಗಳನ್ನು ಗಳಿಸಿದರು.

ಇದು ದೈವಿಕ ಅನುಗ್ರಹ ಮತ್ತು ಆಶೀರ್ವಾದ. ನನಗೆ 100 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ದೊಡ್ಡ ಕುಟುಂಬವಿದೆ. ಭಕ್ತರ ಬೃಹತ್ ಆಗಮನವನ್ನು ನಿರೀಕ್ಷಿಸಿ, ಮಹಾಕುಂಭಕ್ಕೆ ಮುಂಚಿತವಾಗಿ ಒಟ್ಟು 130 ದೋಣಿಗಳನ್ನು ತೆಗೆದುಕೊಂಡೆ, ಅಲ್ಲಿಯವರೆಗೆ ನನ್ನ ಬಳಿ 60 ದೋಣಿಗಳಿದ್ದವು ಎಂದು ಪಿಂಟು ಹೇಳುತ್ತಾರೆ.

 

ಇದು ಕೇವಲ ಒಂದು ಘಟನೆಯಲ್ಲ. ಮಹಾಕುಂಭವು ಇತರ ಅನೇಕ ದೋಣಿ ನಾವಿಕರ ಕುಟುಂಬಗಳಿಗೆ ಸಂಪತ್ತು ಗಳಿಸಿಕೊಟ್ಟಿದೆ. ಅವರಲ್ಲಿ ಅನೇಕರು ತಮ್ಮ ಸಾಲ ಮರುಪಾವತಿಸಿದ ನಂತರ ಈಗ ಸುರಕ್ಷಿತ ಭವಿಷ್ಯವನ್ನು ಹೊಂದಿದ್ದಾರೆ.

2019 ರ ಕುಂಭಮೇಳದಲ್ಲಿ 24 ಕೋಟಿ ಭಕ್ತರು ಪ್ರಯಾಗರಾಜ್‌ಗೆ ಆಗಮಿಸಿದ್ದರು, ಈ ಅನುಭವವು 2025 ರ ಮಹಾಕುಂಭಕ್ಕೆ ಇನ್ನೂ ಹೆಚ್ಚಿನ ಭಕ್ತರು ಬರುತ್ತಾರೆ ಎಂದು ನಿರೀಕ್ಷಿಸಲು ಸಹಾಯ ಮಾಡಿತು ಎಂದು ಪಿಂಟು ಮಹಾರ ಹೇಳಿಕೊಂಡಿದ್ದಾರೆ. ತಮ್ಮ ಈ ದೂರದೃಷ್ಟಿಯಿಂದ ಅವರು 70 ಹೆಚ್ಚುವರಿ ದೋಣಿಗಳನ್ನು ಖರೀದಿಸುವ ಮೂಲಕ ತಮ್ಮ ಕುಟುಂಬದ ದೋಣಿಗಳನ್ನು ವಿಸ್ತರಿಸಿದರು, ಒಟ್ಟು 130 ದೋಣಿಗಳಾದವು.

ದೋಣಗಳನ್ನು ಕೊಳ್ಳಲು ಅವರು ಕುಟುಂಬದ ಮಹಿಳೆಯರ ಆಭರಣಗಳನ್ನು ಹೂಡಿಕೆ ಮಾಡಿದರು. ಇದು ಅವರ ಕುಟುಂಬದ ಭವಿಷ್ಯವನ್ನು ಭದ್ರಪಡಿಸಲು ಗಣನೀಯ ಆದಾಯ ಗಳಿಸಿತು. ಪಿಂಟು ಅವರ ತಾಯಿ ಶುಕ್ಲಾವತಿ ದೇವಿಗೆ ಈ ಆದಾಯವು ಅವರ ಕಲ್ಪನೆಗೂ ಮೀರಿದ್ದು. ತನ್ನ ಪತಿಯ ಮರಣದ ನಂತರದ ಕಷ್ಟಗಳನ್ನು ನೆನಪಿಸಿಕೊಳ್ಳುತ್ತಾ, ಮಹಾಕುಂಭ-2025 ಕುಟುಂಬಕ್ಕೆ ಒಂದು ವರದಾನ, ಎಂದು ಸಾಬೀತಾಯಿತು ಎಂದು ಅವರು ಹೇಳಿದ್ದಾರ. “ಈಗ ನಾನು ನನ್ನ ಮಕ್ಕಳಿಗೆ ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ” ಎಂದು ಶುಕ್ಲಾವತಿ ದೇವಿ ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!