ರಾಯಚೂರು:ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಯಚೂರು ಘಟಕದ ವತಿಯಿಂದ,ಇಂದು 15/3/25 ರಂದು ರಾಯಚೂರಿಗೆ ಆಗಮಿಸುತ್ತಿರುವ ರಾಜ್ಯದ ರಾಜ್ಜ್ಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ ಅವರು ಆಗಮಿಸುತ್ತಿರುವ ಕಾರಣ ದಿಂದ ಜಿಲ್ಲಾ ಪೂರ್ವ ಭಾವಿ ಸಭೆ. ರಾಜ್ಯ ಸಂಚಾಲಕಿ ಉಮಾ ದೇವಿ ಅವರ ನೇತೃತ್ವದಲ್ಲಿ ಮತ್ತು ರಾಯಚೂರು ಜಿಲ್ಲಾ ಅಧ್ಯಕ್ಷರಾದ ಶಿವಪುತ್ರಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ಮಲ್ಲೇಶ್ ನಾಯಕ ಅವರ ಸಮ್ಮುಖದಲ್ಲಿ. ಈ ಸಭೆ ಮಾಡಲಾಯಿತು .

ಈ ಒಂದು ಸಭೆಯಲ್ಲಿ ನೂತನ ರಾಯಚೂರು ತಾಲೂಕ ಅಧ್ಯಕ್ಷ ಉಪ ಅಧ್ಯಕ್ಷರವರನ್ನು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಈ ಸಭೆಗೆ ದೇವದುರ್ಗ ತಾಲೂಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು,ನೂತನ ಅರಿಕೇರಾ ತಾಲೂಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಮಸ್ಕಿ ತಾಲೂಕ ಅಧ್ಯಕ್ಷರು ಇನ್ನು ಬೇರೆ ಬೇರೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ




