Ad imageAd image

ಮುಂಗಾರು ಪೂರ್ವ ಮಳೆಯ ಆರ್ಭಟ : ರಾಜ್ಯಾದ್ಯಂತ ಒಟ್ಟು 5 ಮಂದಿ ಬಲಿ

Bharath Vaibhav
ಮುಂಗಾರು ಪೂರ್ವ ಮಳೆಯ ಆರ್ಭಟ : ರಾಜ್ಯಾದ್ಯಂತ ಒಟ್ಟು 5 ಮಂದಿ ಬಲಿ
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟಕ್ಕೆ ಬೆಂಗಳೂರಿನಲ್ಲಿ ಮೂವರು ಸೇರಿದಂತೆ ರಾಜ್ಯಾದ್ಯಂತ ಒಟ್ಟು 5 ಮಂದಿ ಬಲಿಯಾಗಿದ್ದಾರೆ.ಬೆಂಗಳೂರು, ಚಿಕ್ಕಬಳ್ಳಾಪುರ, ಕಲಬುರಗಿ ಸೇರಿ ರಾಜ್ಯದ15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಐವರು ಮೃತಪಟ್ಟಿದ್ದಾರೆ.

ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಸುರಿದ ಭಾರೀ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಬೆಂಗಳೂರಿನ ಕೆಂಗೇರಿ ಭಾಗದಲ್ಲಿ ದಾಖಲೆಯ 132 ಮಿ.ಮೀ. ಮಳೆ ಸುರಿದಿದ್ದು, ನಗರವ್ಯಾಪ್ತಿಯ 50ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತಗೊಂಡು ಜನರು ಪರದಾಡುವಂತಾಗಿದೆ.

ಬೆಂಗಳೂರಿನಲ್ಲಿ ಮಹಾಮಳೆಗೆ ಮೂವರು ಸಾವು

ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಹಾಮಳೆಗೆ ಮೂವರು ಬಲಿಯಾಗಿದ್ದಾರೆ. ವೈಟ್ ಫೀಲ್ಡ್ ನಲ್ಲಿ ಮನೆಯ ಗೋಡೆ ಕುಸಿದು ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿ ಶಶಿಕಲಾ ಸಾವನ್ನಪ್ಪಿದ್ದಾರೆ.

ಮೋಟಾರ್ ನಿಂದ ಮಳೆ ನೀರು ತೆರವು ಮಾಡಲು ಹೋಗಿ ಕರೆಂಟ್ ಶಾಕ್ ನಿಂದ 12ರ ಬಾಲಕ ಸೇರಿದಂತೆ ಇಬ್ಬರು ಬಲಿಯಾಗಿದ್ದಾರೆ.

ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಮಹಾಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಅಪಾರ್ಟ್ ಮೆಂಟ್ ನ ಬೇಸ್ಮೆಂಟ್ ನಲ್ಲಿ ಮೋಟಾರ್ ನಿಂದ ಮಳೆಯ ನೀರು ಹೊರ ಹಾಕಲು ಹೋಗಿ ಕರೆಂಟ್ ಶಾಕ್ ನಿಂದ 12 ವರ್ಷದ ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.

ಮೃತರನ್ನು ಮನಮೋಹನ್ ಕಾಮತ್(63) ಹಾಗೂ ದಿನೇಶ್ (12) ಎಂಬುದಾಗಿ ಗುರುತಿಸಲಾಗಿದೆ. ಇವರು ಬಿಟಿಎಂ ಲೇಔಟ್ ನ 2ನೇ ಹಂತದಲ್ಲಿರುವಂತ ಎನ್ ಎಸ್ ಪಾಳ್ಯದಲ್ಲಿನ ಮಧುವನ ಅಪಾರ್ಮೆಂಟ್ ನ ನಿವಾಸಿಗಳು. ಮೃತರ ಕುಟುಂಬಗಳಿಗೆ ಬಿಬಿಎಂಪಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷರು. ಪರಿಹಾರಘೋಷಿಸಲಾಗಿದೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!