ಕಾಳಗಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ, ಕಾಳಗಿ ಬಂದ್ ಕರೆಗೆ ತಾಲೂಕ ಸಂವಿಧಾನ ರಕ್ಷಣೆ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಪೂರ್ವ ಸಿದ್ಧತೆ ಸಭೆ ಕರೆಯಲಾಗಿತ್ತು, ಜನೆವರಿ 8 ರಂದು ಕಾಳಗಿ ಬಂದ್ ಪ್ರಯುಕ್ತ ಬೆಳಿಗ್ಗೆ 6ಗಂಟೆಯಿಂದ ಸಾಯಂಕಾಲ 04 ಗಂಟೆವರೆಗೆ ಕಾಳಗಿ ಸಂಪೂರ್ಣ ಬಂದ್ ವಾಗಲಿದ್ದು, ಕಾಳಗಿ ಪಟ್ಟಣದ ಚೌಡಿಕಟ್ಟಿಯಿಂದ ಡಾ ಬಿ ಆರ್ ಅಂಬೇಡ್ಕರ್ ವೃತ್ತದವರೆಗೆ ಬ್ರಹತ್ ಪ್ರತಿಭಟನೆಯೊಂದಿಗೆ ಘೋಷಣೆಯನ್ನು ಕೂಗುತ್ತಾ ಬರುವುದು ಎಂದು ಮತ್ತು ತಾಲೂಕಿನ ಎಲ್ಲಾ ಗ್ರಾಮದಿಂದ ಎಲ್ಲಾ ಪ್ರಗತಿಪರ ಸಂಘಟನಾಕಾರರು, ಅಂಬೇಡ್ಕರ್ ಅನುವಾಯಿಗಳು ಎಲ್ಲಾ ಸಮುದಾಯದ ಹಿರಿಯರು ಯುವಕರು ಬಂದು ಈ ಪ್ರತಿಭಟನೆ ಯಶಸ್ವಿಗೊಳಿಸುವ ಮೂಲಕ, ಪ್ರಗತಿಪರ ದಲಿತ ಸಂಘಟನೆಗಳು, ಹಿಂದುಳಿದ ಸಮುದಾಯದಗಳು ಮತ್ತು ವೀರಶೈವ ಸಮುದಾಯ, ಅಲ್ಪಸಂಖ್ಯಾತ ಸಮುದಾಯ, ವ್ಯಾಪಾರಸ್ಥ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದ್ವಿಚಕ್ರ ವಾಹನ ಸಂಘಟನೆ, ರಾಜಿಕೀಯ ದೂರಿಣರು, ಹಾಗೂ ಪ್ರಗತಿಪರ ಚಿಂತಕರು ಬುದ್ಧಿಜೀವಿಗಳು ಯುವಜನರು ಕಾಳಗಿ ಬಂದ್ ಕಾರ್ಯಕ್ರಮಕ್ಕೆ ಬೆಂಬಲಿಸಿ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿ ಕರೆ ನೀಡಿದರು.
ವಿಶೇಷ ಸೂಚನೆ : ಕಾಳಗಿ ಬಂದ್ ಪ್ರಯುಕ್ತ : ಮೆಡಿಕಲ್ ಮತ್ತು ಆಸ್ಪತ್ರೆ ಎಂದಿನಂತೆ ತೆರೆದಿರುತ್ತೆ ,
ಮಿಕ್ಕೆಲ್ಲಾ ಶಾಲಾ ಕಾಲೇಜು, ಅಂಗಡಿಗಳು, ಬೀದಿ ವ್ಯಾಪಾರ ಮುಚಿಡಲಾಗುತ್ತೆ ಎಂದು ದಲಿತ ಹಿರಿಯ ಮುಖಂಡರುಗಳಾದ,ಶಂಕರ್ ಹೇರೂರ್ ಮತ್ತು ಕಲ್ಯಾಣರಾವ್ ಡೊಣ್ಣೂರು ತಿಳಿಸಿದರು.
ವರದಿ : ಹಣಮಂತ ಕುಡಹಳ್ಳಿ