ಜಮಖಂಡಿ : ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕು ಕ್ರೀಡಾಂಗಣದಲ್ಲಿ 79 ನೇ ಸ್ವಾತಂತ್ರೋತ್ಸವವನ್ನು ಪ್ರತಿ ವರ್ಷಕ್ಕಿಂತ ಈ ವರ್ಷ ವಿಷೇಶವಾಗಿ ಅಚ್ಚುಕಟ್ಟಾಗಿ ನಡೆಸುವ ಸಲುವಾಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಜಮಖಂಡಿ ಆಡಳಿತ ಸೌದದ ತಹಸೀಲ್ದಾರ್ ಸಭಾ ಭವನದಲ್ಲಿ ಪೂರ್ವಭಾವಿ ಸಭೆಯನ್ನು ಜಮಖಂಡಿ ಶಾಸಕರಾದ ಜಗದೀಶ ಗುಡಗುಂಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಅಗಷ್ಟ್ 15 ಸ್ವತಂತ್ರೋತ್ಸವ ಸಕಲ ಸಿದ್ದತೆಗಳನ್ನು ಮಾಡಿಕೊಂಡು ಅಚ್ಚುಕಟ್ಟಾಗಿ ಮಾಡಿಕೊಳ್ಳಲು ಮತ್ತು ಪ್ಲಾಸ್ಟಿಕ್ ಧ್ವಜವನ್ನು ಸಂಪೂರ್ಣವಾಗಿ ನಿಷೇದಿಸಲು ಸೂಚನೆ ನೀಡಿದ್ದಾರೆ.
ಭಾಗಿಯಾದ ಸ್ಥಳೀಯ ಮುಖಂಡರುಗಳು ಮತ್ತು ಅಧಿಕಾರಿಗಳು ಕಾರ್ಯಕ್ರಮದ ಬಗ್ಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಮಖಂಡಿ ಉಪವಿಬಾಧಿಕಾರಿ ಶ್ವೇತಾ ಬಿಡಿಕಾರ್, ತಹಶೀಲ್ದಾರ್ ಅನಿಲ್ ಬಡಿಗೇರ್, ಪೌರಾಯುಕ್ತ ಜ್ಯೋತಿ ಗಿರೀಶ್, ಮತ್ತು ತಾಲೂಕು ಪಂಚಾಯತಿ EO ಸಚಿನ್ ಮಾಚಕನೂರ, CPI ಮಲ್ಲಪ್ಪ ಮಡ್ಡಿ, ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಯ ಮುಖಂಡರು ಮತ್ತು ಪತ್ರಕರ್ತರು ಬಾಗಿಯಾಗಿದ್ದರು.
ವರದಿ : ಬಂದೇನವಾಜ ನದಾಫ.




