ಕಲಬುರಗಿ: ಜಯ ಕರ್ನಾಟಕ ಜನಪರ ವೇದಿಕೆ ಬೀದರ್, ಯಾದಗಿರಿ ಮತ್ತು ಕಲಬುರಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಈ ಸಭೆಯನ್ನು ಪ್ರಾರಂಭಿಸುವ ಮೊದಲು ನೇತಾಜಿ ಸುಭಾಷ್ ಚಂದ್ರ ಬೋಸ್ ನವರ ಜನ್ಮದಿನದ ಸವಿ ನೆನಪಿನ ಆಚರಣೆ ಮಾಡಲಾಯಿತು.
ಜಯ ಕರ್ನಾಟಕ ಜನಪರ ವೇದಿಕೆ ಸೇಡಂ ತಾಲೂಕು ಘಟಕದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಮಿಟಿಯ ಉಪಾಧ್ಯಕ್ಷರಾದ ಹಾಲಪ್ಪ ವರವಿ, ರಾಜ್ಯ ಸಂಚಾಲಕರು ವೆಂಕಟೇಶ್ ರೆಡ್ಡಿ ಯಾದಗಿರಿ, ರಾಜ್ಯ ಸಲಹೆಗಾರರು ಉಮೇಶ್ ಬೀರಬಿಟ್ಟೆ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷರಾದ ಬಸವರಾಜ್ ಕೊರಳಿ, ಬೀದರ್ ಜಿಲ್ಲೆಯ ಜಿಲ್ಲಾಧ್ಯಕ್ಷರು ಸಂಜು ಕುಮಾರ್ ಟೋಳ್ಳೆ, ಕಲಬುರಗಿ ಜಿಲ್ಲಾ ಉಪಾಧ್ಯಕ್ಷರಾದ ವರದಾಸ್ವಾಮಿ ಬಿ ಹಿರೇಮಠ, ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಅರುಣ್ ನಾಮದಾರ್, ಜಿಲ್ಲಾ ಕಾರ್ಯದರ್ಶಿ ಅಸಿಫ್ ರುದ್ರಾವಾಡಿ, ಅಳಂದ್ ತಾಲೂಕ ಅಧ್ಯಕ್ಷರಾದ ನಾಗರಾಜ್ ಗೋಡಕೆ, ಸದಾನಂದ್ ಕ್ಷೇತ್ರಿ ಅಫ್ಜಲ್ ಪುರ, ವಿಕ್ರಂ ಜೇವರ್ಗಿ, ರಮೇಶ್ ಮಡಿವಾಳ್, ಸಂದೀಪ್ ಭೀಮಳ್ಳಿ, ಸುನಿಲ್ ಐರೋಡಗಿ, ಮುತ್ತು ಕುರಿಮನಿ, ರಮೇಶ್ ವಿಶ್ವಕರ್ಮ ಚಿಂಚೋಳಿ, ಉಮೇಶ್ ದೇವರಲ್ಲಿ ಸೇಡಂ, ಕೇಶವ್ ರೆಡ್ಡಿ ಮತ್ತು ವಿವಿಧ ತಾಲೂಕಿನ ತಾಲೂಕ ಪದಾಧಿಕಾರಿಗಳು ಜಿಲ್ಲೆಯ ಎಲ್ಲಾ ಜಯ ಕರ್ನಾಟಕ ಜನಪರ ವೇದಿಕೆಯ ಕನ್ನಡ ಅಭಿಮಾನದ ಸೇವಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




