Ad imageAd image

ದಲಿತಪರ ಸಂಘಟನೆಗಳ ಪೂರ್ವಭಾವಿ ಸಭೆ

Bharath Vaibhav
ದಲಿತಪರ ಸಂಘಟನೆಗಳ ಪೂರ್ವಭಾವಿ ಸಭೆ
WhatsApp Group Join Now
Telegram Group Join Now

ಡಿ,೩೧ ರಂದು ಶಹಾಪುರ ಬಂದ್ ನಿರ್ಧಾರ, ೧೦ ಸಾವಿರ ಜನ ನೀರೀಕ್ಷೆ!

ಶಹಾಪುರ:ಸಂಸತ್ ಭವನದಲ್ಲೆ ವಿಶ್ವರತ್ನ ಡಾ,ಬಾಬಾಸಾಹೇಬ ಅಂಬೇಡ್ಕರವರನ್ನು ಅವಮಾನಿಸಿ ಮಾತನಾಡಿದ, ಕೊಮುವಾದಿ ಕೇಂದ್ರ ಗ್ರಹ ಮಂತ್ರಿ ಅಮೀತ ಶಾಹಾರವರನ್ನು ಕೇಂದ್ರ ಮಂತ್ರಿ ಮಂಡಲದಿAದ ವಜಾಗೊಳಿಸಬೆಕು, ಸಾರ್ವತ್ರಿಕ ಕ್ಷಮೆ ಯೋಚಿಸಿಬೆಕು ಎಂದು ಆಗ್ರಹಿಸಿ, ಶಹಾಪುರ ದಲಿತಪರ ಸಂಘಟನೆಗಳ ಆಶ್ರೆಯದಲ್ಲಿ, ಡಿ,೩೧ರಂದು ಶಹಾಪುರ, ಬಂದ್ ಕರೆ ನೀಡಿದರು, ಸುಮಾರು ೧೦ ಸಾವಿರಕ್ಕೂ ಅಧಿಕ ಪ್ರಗತಿಪರ ಸಂಘಟನೆಗಳು ಮತ್ತು ದಲಿಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗವಹಿಸುವ ನೀರೀಕ್ಷೆ ಹೊಂದಲಾಗಿದೆ,ಎAದು ಮುಖಂಡರು ವಿವರಿಸಿದರು,ಅವರು ನಗರದ ಪ್ರವಾಸಿ ಮಂದಿರದಲ್ಲಿ ಪೂರ್ವ ಭಾವಿ ಸಭೆಯಲ್ಲಿ, ಈ ನಿರ್ಧಾರ ಕುರಿತು ಮಾತನಾಡಿದರು.

ಈ ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿಯವರು ಮಾತನಾಡಿ,ದೇಶದ ಆರ್ಥಿಕ ತಜ್ಞ,ಮಾಜಿ ಪ್ರಧಾನಿ ಮನಮೋಹನಸಿಂಗ್ ರವರ ನಿಧನದಿಂದ ಭಾರತ ದೇಶ ಓರ್ವ ಅತ್ಯುತ್ತಮ ವಾಗ್ಮಿಯನ್ನು ಕಳೆದುಕೊಂಡಿದ್ದು ಅವರ ಆತ್ಮಕ್ಕೆ ಚೀರ ಶಾಂತಿ ಸಿಗಲೆಂದು ಆಶಿಸಿ ಮಾತನಾಡುತ್ತಾ, ವಿಶ್ವದಲ್ಲೆ ಡಾ,ಬಾಬಾಸಾಹೇಬರು ಅತ್ಯಂತ ಸರ್ವ ಶ್ರೇಷ್ಟ ಸಂವಿಧಾನ ಶಿಲ್ಪಿಯಾಗಿದ್ದಾರೆ, ಪ್ರಜಾಪ್ರಭುತ್ವವನ್ನು ಜಾರಿಗೆ ತಂದು ಅಮೀತ ಶಾಹರನ್ನು ಕೇಂದ್ರ ಮಂತ್ರಿ ಸ್ಥಾನಮಾನ ನೀಡಿದ್ದು, ಡಾ,ಬಾಬಾಸಾಹೇಬರ ಸಂವಿಧಾನ ಎನ್ನುವದನ್ನು ಮರೆತು ಮಾತನಾಡಿದ ಜಾತಿವಾದಿ, ಶಾ ರನ್ನು ಕೂಡಲೆ ಸಂಪುಟದಿAದ ವಜಾಗೊಳಿಸಬೆಕು ಎಂದರು, ರೈತ ಮುಖಂಡರಾದ ಚೆನ್ನಪ್ಪ ಆನೆಗುಂದಿ ಮಾತನಾಡಿ,ಕೇಂದ್ರದ ಬಿಜೆಪಿ ಸರ್ಕಾರ ಧಾರ್ಮಿಕ ಹೆಸರಿನಲ್ಲಿ ಮುನುವಾದನ್ನು ಜಾರಿಗೆ ತರುವ ಉನ್ನಾರದಲ್ಲಿದ್ದಾರೆ.

ಸಂವಿಧಾನ ಬದಲಾವಣೆ ಮಾಡುವದರಲ್ಲಿ ಕೇಂದ್ರ ಸರ್ಕಾರ ಸಂಕಲ್ಪ ಹೊಂದಿದೆ , ೧೦ ವರ್ಷಗಳಲ್ಲಿ ಆರ್ಥಿಕ ಅವ್ಯಸ್ಥೆ ಹದಗೆಟ್ಟಿದೆ ಎಂದರು,ಕೆ,ಆರ್,ಡಿಎಸ್,ಎಸ್. ಯಾದಗಿರಿ ಜಿಲ್ಲಾ ಸಂಚಾಲಕರಾದ ಶಿವುಪುತ್ರ ಜವಳಿ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯ ದಿಕ್ಕನ್ನು ತಪ್ಪಿಸುವಲ್ಲಿ ಅಮೀತ ಶಾ ಸಂಪುಟ ಮುಂದಾಗಿದ್ದು, ಪ್ರಗತಿಪರ ಸಂಘಟನೆಗಳು ಒಂದಾಗಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು,ಎಸ್,ಎಸ್,ಡಿ, ಜಿಲ್ಲಾಧ್ಯಕ್ಷರಾದ ಮಾಹಾದೇವ ದಿಗ್ಗಿ, ಎಸ್,ಡಿ,ಪಿಐ ಮುÀಖಂಡ ಸೈಯದ್ ಕಾಲಿದ, ಟಿಪ್ಪಿಸುಲ್ತಾನ ಸಂಘಟನೆ ಅಧ್ಯಕ್ಷರಾದ ಸೈಯಿದ್ ಖಾದ್ರಿ, ದಲಿತ ಮುಖಂಡರಾದ ಬಸವರಾಜ ಗುಡಿಮನಿ,ರಾಯಪ್ಪ ಸಾಲಿಮನಿ, ಅಬ್ದುಲ್ ಕಾದರ್ ಹಕ್ತೆರಿ ಸಾಹೇಬ್, ಅಮಾಜಾದ್ ಇಸ್ಲಾಂ ಜಾಮತೆ, ಮರೆಪ್ಪ ಕನ್ಯಾಕೊಳೂರ, ಮರೆಪ್ಪ ಕ್ರಾಂತಿ, ಚಂದ್ರಶೇಖರ ಗುತ್ತೆದಾರ,ಶರಣರಡ್ಡಿ ಹತ್ತಿಗೂಡೂರ, ಶಾಂತಪ್ಪ ಸಾಲಿಮನಿ,ಚಂದ್ರಕಾAತ ಬಜೇರಿ, ಪರಶುರಾಮ ರೋಜಾ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಹಾಜರಿದ್ದರು,ದಲಿಪರ ಸಂಘಟನೆಗಳ ಮುಖಂಡರಾದ ಮರೆಪ್ಪ ಜಾಲಿಮೆಂಚಿ ಸರ್ವರನ್ನು ಸ್ವಾಗತಿಸಿ ವಂದಿಸಿದರು, ಈ ಸಭೆಯಲ್ಲಿ ಅಗಲಿದ ಮಾಜಿ ಪ್ರಧಾನಿ ಮನಮೋಹನಸಿಂಗಜೀಯವರಿಗೆ ಭಾವ ಪೂರ್ಣ ಶ್ರದ್ದಾಂಜಲಿ ಆರ್ಪಿಸಿ  ಮೌನಾಚರಣೆಮಾಡಲಾಯಿತು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!