ಸಿರುಗುಪ್ಪ : ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ಆಗಸ್ಟ್ 9 ನೂಲ ಹುಣ್ಣಿಮೆಯಂದು ಜರುಗಲಿರುವ ಶ್ರೀ ಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆ ನಡೆಯಿತು.
ಕೊರಚ ಕೊರಮ ಸಮುದಾಯದ ಪದಾಧಿಕಾರಿಗಳ ಸಲಹೆಯನ್ನು ಕೇಳಲಾಯಿತು.
ತಾಲೂಕು ಕಛೇರಿ ಇಲ್ಲವೇ ಸಿ.ಡಿ.ಪಿ.ಓ ಕಛೇರಿಯಲ್ಲಿ ಸರಳವಾಗಿ ಜಯಂತಿ ಆಚರಿಸಲು ತೀರ್ಮಾನಿಸಲಾಯಿತು.
ಶಿರಸ್ತೆದಾರ್ ಸಿದ್ದಾರ್ಥ್ ಕಾರಂಜಿ ಅವರು ಮಾತನಾಡಿ ಎಲ್ಲಾ ಜನಾಂಗಕ್ಕೆ ಆದರ್ಶವಾಗಿರುವ ಶರಣರ ಜಯಂತಿಯನ್ನು ತಾಲೂಕು, ಗ್ರಾಮಮಟ್ಟದಲ್ಲಿನ ಎಲ್ಲಾ ಕಛೇರಿಗಳು, ಶಾಲಾ ಕಾಲೇಜುಗಳಲ್ಲಿ ಆಚರಣೆಗೆ ಆದೇಶ ನೀಡಲಾಗಿದ್ದು, ಎಲ್ಲಾ ಇಲಾಖೆಯ ಅಧಿಕಾರಿಗಳು ಅಧೀನ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ತಿಳಿಸಿದರು.
ಇದೇ ವೇಳೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರವರ್ಮ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಮ್.ಸಿದ್ದಯ್ಯ, ತಾಲೂಕಾಧ್ಯಕ್ಷ ಕೆ.ಗೋಪಾಲಪ್ಪ, ಉಪಾಧ್ಯಕ್ಷರಾದ ಡಿ.ವೆಂಕಟೇಶ್, ಕೆ.ಸುಂಕಪ್ಪ, ಕಾರ್ಯದರ್ಶಿ ರಮೇಶ್ ಭಜಂತ್ರಿ, ಕಾನೂನು ಸಲಹೆಗಾರ ಕುರುವಳ್ಳಿ ತಿಮ್ಮಯ್ಯ, ಮುಖಂಡರಾದ ಕೆ.ವೆಂಕಟೇಶ, ಹುಲುಗಪ್ಪ, ಬಸಪ್ಪ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




