ಕಾಳಗಿ : ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ ಜಯಂತೋತ್ಸವ ಸಮಿತಿಯ ಪದಾಧಿಕಾರಿಗಳ ರಚನೆ ಸಮಿತಿ ಕುರಿತು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ಸೇರಲಾಯಿತು, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಸಮಿತಿಯನ್ನು ಪೂರ್ಣ ಪ್ರಮಾಣದ ರಚನೆ ಕುರಿತು 30/03 /2025 ರಂದು ರವಿವಾರ ಬೆಳಿಗ್ಗೆ 10:30 ಕ್ಕೆ ಕಾಳಗಿ ಪ್ರವಾಸಿ ಮಂದಿರದಲ್ಲಿ ಸಮುದಾಯದ ಹಿರಿಯ ಮುಖಂಡರ ಸಮ್ಮುಖದಲ್ಲಿ ಸಭೆ ಕರೆಯಲಾಗಿದ್ದು,
ಆದ್ದರಿಂದ ಕಾಳಗಿ ತಾಲೂಕಿನ ಸಂಘಟನಾಕರಾರು, ಸಮಾಜ ಚಿಂತಕರು, ಯುವಕರು, ಬುದ್ಧಿ ಜೀವಿಗಳು, ಬುದ್ಧ ಬಸವ ಅಂಬೇಡ್ಕರ್ ರವರ ಅಭಿಮಾನಿಗಳು ಮತ್ತು ಅನುವಾಯಿಗಳು ,ಎಲ್ಲರು ಬಂದು ಈ ಸಮಿತಿ ರಚನಾ ಸಭೆಯಲ್ಲಿ ಭಾಗವಹಿಸಿ ಯಶಸ್ವೀಗೊಳಿಸಬೇಕು ಎಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ಗಂಗಾಧರ್ ಮಾಡ್ಬೂಳ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ :ಕಲ್ಯಾಣ್ ರಾವ್ ಡೊಣ್ಣೂರ, ಶಂಕರ್ ಹೆರೂರ್,ಕತಲಪ್ಪ ಅಂಕನ್, ಮಲ್ಲಿಕಾರ್ಜುನ್ ಗಂವಾರ್,ಮಹೇಂದ್ರ ಸೂಗೂರು, ಬಸವರಾಜ್ ಮೇಲ್ಕೇರಿ, ಮಲ್ಲಿಕಾರ್ಜುನ್ ಕನ್ನಡ್ಗಿ, ಗುರುನಂದೀಶ್ ಕೋಣಿನ್, ರತನ್ ಕನ್ನಡಿಗಿ, ನಾಗರಾಜ್ ಬೇವಿನ ಕಾರ್, ಪ್ರದೀಪ್ ಡೊಣ್ಣೂರು ಅವಿನಾಶ್ ಕೊಡೆದುರ, ಬಸವರಾಜ ಹೊಸಮನಿ, ಬಾಬುರಾವ ಡೊಣ್ಣೂರು, ಸಿದ್ದು ನಾಗೂರ್, ಅಮರ್ ಗೋಟೂರು, ಅರ್ಜುನ್ ಚಿಂಚೋಳಿ ಎಚ್, ಮಹಾದೇವ ಗೋಳ, ಈ ಒಂದು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.
ವರದಿ : ಹಣಮಂತ ಕುಡಹಳ್ಳಿ