ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮಿನಿ ವಿಧಾನಸೌಧ ತಹಶೀಲ್ದಾರ್ ಕಚೇರಿ ಒಳಗಡೆ ದಿನಾಂಕ 07.10.2025 ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆ ತಾಲೂಕಿನ ದಂಡಾಧಿಕಾರಿಗಳಾದ ಪ್ರಕಾಶ್ ಹೊಳೆಪ್ಪಗೊಳ ಅವರ ಅಧ್ಯಕ್ಷತೆಯಲ್ಲಿ ನಿರ್ವಹಿಸಲಾಯಿತು.
ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಕರೆದು ಪ್ರತಿವರ್ಷದಂತೆ ಈ ವರ್ಷವೂ ದಿನಾಂಕ 7.10.2025 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಇರುವುದರಿಂದ ತಮ್ಮ ತಮ್ಮ ಇಲಾಖೆಯ ಕಚೇರಿ ಒಳಗಡೆ ವಾಲ್ಮೀಕಿಯ ಭಾವಚಿತ್ರಕ್ಕೆ ಪೂಜೆ ಮಾಡುವುದೊಂದಿಗೆ ನೆರವೇರಿಸಬೇಕೆಂದು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ತಾಲೂಕಿನ ಎಲ್ಲ ವಾಲ್ಮೀಕಿ ಸಮುದಾಯ ಮುಖಂಡರು ಈ ಒಂದು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು ಮಾನ್ಯ ತಹಸೀಲ್ದಾರರು ಪ್ರತಿ ವರ್ಷದಂತೆ ಈ ಬರುವ 7ನೇ ತಾರೀಖದಂದು ನೀವು ವಾಲ್ಮೀಕಿಯ ಜಯಂತಿಯನ್ನು ಆಚರಿಸುತ್ತೀರಾ ಎಂದು ಕೇಳಿದಾಗ ಎಲ್ಲಾ ವಾಲ್ಮೀಕಿ ಸಮುದಾಯ ಮುಖಂಡರು ಕೂಡಿಕೊಂಡು ಇಲ್ಲ ಸರ್ ಈಗ ಬರುವ 7ನೇ ತಾರೀಕು ಹುಣ್ಣಿಮೆ ಇರುವದರಿಂದ ನಾವು ಎಲ್ಲ ಸಮದಾಯ ಮುಖಂಡರು ಮಾತನಾಡಿ 13ನೇ ತಾರೀಕ ದಂದು ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದು ತಾಲೂಕಿನ ದಂಡಾಧಿಕಾರಿಗಳಿಗೆ ತಿಳಿಸಿರುತ್ತಾರೆ.
ಈ ಒಂದು ಪೂರ್ವಭಾವಿ ಸಭೆಯಲ್ಲಿ ವಾಲ್ಮೀಕಿ ಸಮುದಾಯದ ಅಧ್ಯಕ್ಷರಾದ ಪ್ರಕಾಶ್ ತಳವಾರ, ಉಪಾಧ್ಯಕ್ಷರಾದ ಬಸವರಾಜ ಪೂಜಾರ, ಹಾಗೂ ಮಾರುತಿ ಪೂಜಾರ್, ಕಾಳಪ್ಪ ಹೂವನ್ನವರ, ಚುರ್ಚಪ್ಪ ಮಡ್ಡಿ , ಗೋವಿಂದ ಮಡ್ಡಿ, ಮಾಂತೇಶ ಗೊಡಚಿ, ಯಲ್ಲಪ್ಪ ಕುರಿ, ಮತ್ತು ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಸರ್ವ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಮಂಜುನಾಥ ಕಲಾದಗಿ




