ಸಿಂಧನೂರು: ಕಳೆದ ನಾಲ್ಕು ದಿವಸಗಳಿಂದ ಹಗಲು- ರಾತ್ರಿ ಧಾರಕಾರ ಸುರಿದ ಮಳೆಗೆ ಮನೆಗಳ ಮೇಲ್ಚಾವಣಿ ಮತ್ತು ಗೋಡಿಗಳು ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಮನೆ ಮಂದಿ ಪ್ರಾಣಪಾಯದಿಂದ ಪಾರಾದ ಘಟನೆ ನಡೆದಿದೆ.
ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ‘ಹಾರಾಪುರ’ ಗ್ರಾಮದ ದುರ್ಗಮ್ಮ ಗಂಡ ಲಕ್ಷ್ಮಣ. ಲಕ್ಷ್ಮಿ ಗಂಡ ರಮೇಶ್. ಶಂಕ್ರಮ್ಮ ಗಂಡ ಪಕೀರಪ್ಪ. ರಾಜಮ್ಮ ಗಂಡ ರಾಜಾಸಾಬು ಎಂಬುವರಿಗೆ ಸೇರಿದ ಮಣ್ಣಿನ ಮನೆಗಳು ಕುಸಿದಿದ್ದು ಮನೆಯಲ್ಲಿ ದವಸ ಧಾನ್ಯ. ಬಟ್ಟೆ ಬರಿ ಪಾತ್ರೆಗಳು ಇನ್ನಿತರ ವಸ್ತುಗಳು ಹಾನಿಯಾಗಿವೆ.
ಇನ್ನು ಮನೆಯವರು ಮನೆಯ ಮುಂಭಾಗದಲ್ಲಿ ಇದ್ದ ವೇಳೆ ಮನೆ ಕುಸಿತವಾಗಿದ್ದು ಅದೃಷ್ಟವಶಾತ್ ಮನೆಯವರಿಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಅಕಾಲಿಕ ಮಳೆ ಅವಘಡದಿಂದ ಮನೆಗಳು ಕಳೆದುಕೊಂಡ ಸಂತ್ರಸ್ತ ಕುಟುಂಬಗಳು ಬೀದಿಗೆ ಬಂದಂತಾಗಿದೆ ಈ. ಅವಘಡ ತಿಳಿದ ಕಂದಾಯ ನಿರೀಕ್ಷಕರು ಗ್ರಾಮ ಪಂಚಾಯತಿ ಸದಸ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿ ವರದಿ ಸಂಗ್ರಹಿಸಿದ್ದಾರೆ.
ಕೂಡಲೇ ಈ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಮತ್ತು ಡಿಎಸ್ಎಸ್. ಮುಖಂಡ ನಿರುಪಾದೆಪ್ಪ ಎಲೆಕೂಡ್ಲಿಗಿ ಒತ್ತಾಯಿಸಿದ್ದಾರೆ.
ವರದಿ: ಬಸವರಾಜ ಬುಕ್ಕನಹಟ್ಟಿ




