ಬಾದಾಮಿ ಸುಕ್ಷೇತ್ರ ಶಕ್ತಿ ಪೀಠ ಬಾದಾಮಿ ಬನಶಂಕರಿ ದೇವಿ ಜಾತ್ರೆಗೆ ಸಿದ್ಧತೆ

Bharath Vaibhav
ಬಾದಾಮಿ ಸುಕ್ಷೇತ್ರ ಶಕ್ತಿ ಪೀಠ ಬಾದಾಮಿ ಬನಶಂಕರಿ ದೇವಿ ಜಾತ್ರೆಗೆ ಸಿದ್ಧತೆ
WhatsApp Group Join Now
Telegram Group Join Now

ಬಾದಾಮಿ : ಇತಿಹಾಸ ಪ್ರಸಿದ್ದ ಬಾದಾಮಿ ಸುಕ್ಷೇತ್ರ ಶಕ್ತಿ ಪೀಠ ಬಾದಾಮಿ ಬನಶಂಕರಿ ದೇವಿ ಜಾತ್ರೆಗೆ ಸಿದ್ಧತೆ, ಜಗನ್ಮಾತೆ ಶಾಖ೦ಭರಿ ಬನಶಂಕರಿ ದೇವಿಯ ಪೂಜಾ ಕಾರ್ಯಕ್ರಮಗಳು ಚಾಲನೆ.

ಚಾಲುಕ್ಯರ ಅಧಿದೇವತೆ ನವಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಸುಕ್ಷೇತ್ರ ಬನಶಂಕರಿ ದೇವಿಯ ಇತಿಹಾಸ ಪ್ರಸಿದ್ಧ ಜಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇದೇ ತಿಂಗಳು ಜನೆವರಿ 13 ನೇ ತಾರೀಖಿನಂದು ಶಾಖ೦ಭರಿ ಬಾದಾಮಿ ಬನಶಂಕರಿ ದೇವಿಯ ಮಹಾರಥೋತ್ಸವ ಜರುಗಲಿದ್ದು ನಿನ್ನೆಯಿಂದ 9 ದಿನಗಳವರೆಗೆ ಶಕ್ತಿ ಪೀಠ ಬನಶಂಕರಿ ದೇವಿಗೆ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುವುದು ವಿಶೇಷ. ಬನಶಂಕರಿ ದೇವಿಯ ಮೂಲ ಸ್ಥಳ ಚೊಳಚಗುಡ್ಡ ಗ್ರಾಮದಿಂದ ಪಾಲಿಕೆ ಬಂದು ಹೋದಮೇಲೆಯೇ ದೇವಸ್ಥಾನದ ಜಾತ್ರಾ ಪೂಜಾ ಕಾರ್ಯಕ್ರಮಗಳು ಜಾರುಗುವುದು ಆದಿ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಎರಡನೆಯ ದಿನವಾದ ಇಂದು ಬನಶಂಕರಿ ದೇವಿಯ ಮೂಲ ವಿಗ್ರಹದೊಂದಿಗೆ ಸಂಪ್ರದಾಯಿಕ ಕರಡಿಮಜಲು ವಾದ್ಯಗಳೊಂದಿಗೆ ಗರ್ಭಗುಡಿಯಿಂದ ಮುಖ್ಯ ದ್ವಾರದಿಂದ ಹಾಯ್ದು ದೇವಿಯ ತೇರು ಇರುವ ಜಾಗಕ್ಕೆ ಆಗಮಿಸಿ ರಥಕ್ಕೆ ವಿಧಿವಿಧಾನಗಳಿಂದ ಇಲ್ಲಿನ ಅರ್ಚಕರು ಪೂಜೆ ಸಲ್ಲಿಸಿ ಮರಳಿ ದೇವಸ್ಥಾನದ ಗರ್ಭಗುಡಿಗೆ ತೆರಳಿದರು.

ತಾಯಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವದ ವಿಶೇಷ ಪೂಜಾ ಕಾರ್ಯಕ್ರಮಗಳ ಬಗ್ಗೆ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಅರ್ಚಕರು ಮಾಧ್ಯಮ ಸಲಹೆಗರಾರು ಆದ ಮಹೇಶ್. ಎಸ್. ಪೂಜಾರ ಅವರು ನಮ್ಮ ಮಾಧ್ಯಮಗಳೊಂದಿಗೆ ಭಕ್ತರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!